23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್‌ಗೆ “ಶಿಕ್ಷಣ ಸೇವಾರತ್ನ “ಪ್ರಶಸ್ತಿ

ಬೆಳ್ತಂಗಡಿ: ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ನೀಡಿರುವ ಗಣನೀಯ ಸೇವೆಗಾಗಿ ಕನ್ನಡ ಫಿಲಂ ಚೇಂಬರ್ ನೀಡುವ ೨೦೨೫ನೇ ಸಾಲಿನ “ಶಿಕ್ಷಣ ಸೇವಾರತ್ನ” ಪ್ರಶಸ್ತಿಯನ್ನು ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್ ರವರು ಬೆಂಗಳೂರಿನಲ್ಲಿ ಸ್ವೀಕರಿಸಿದರು.


ಕಲಾ ವಾಣಿಜ್ಯ ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣ ಪಡೆದಿರುವ ಬಹುಮುಖ ಪ್ರತಿಭೆಯಾಗಿರುವ ಇವರು ಶೈಕ್ಷಣಿಕ, ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳಲ್ಲಿ ಗುರುತಿಸಿಕೊಂಡಿರುವ ಇವರು 26 ವರ್ಷಗಳ ಸುದೀರ್ಘ ಅವಧಿಯಲ್ಲಿ ಸರಿಸುಮಾರು ೧೬೦೦ಕ್ಕೂ ಹೆಚ್ಚು ಜಿಲ್ಲಾ, ರಾಜ್ಯ, ರಾಷ್ಟçಮಟ್ಟದ ವೈಜ್ಞಾನಿಕ ಮಾದರಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಕಲಾ, ವಾಣಿಜ್ಯ, ವಿಜ್ಞಾನ, ಶಿಕ್ಷಣದಲ್ಲಿ ಪದವಿ, ವಿವಿಧ ಭಾಷಾ ವಿಷಯಗಳಲ್ಲಿ, ಕಲಾ, ವಾಣಿಜ್ಯ ವಿವಿಧ ವಿಷಯಗಳನ್ನು ಮತ್ತು “ತುಳು ಭಾಷೆಯಲ್ಲಿ” ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿಯನ್ನು ಒಳಗೊಂಡು ೯ಕ್ಕೂ ಹೆಚ್ಚು ಪದವಿಗಳನ್ನು ಪಡೆದಿರುತ್ತಾರೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಡಿ.೨೪ ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳ, ಚಲನಚಿತ್ರಕಲಾವಿದರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರು ಮೂಲತಃ ಮಂಜೇಶ್ವರದವರಾಗಿದ್ದು, ಬೆಳ್ತಂಗಡಿ ಲಾಯಿಲದ ನಿವಾಸಿಯಾಗಿದ್ದಾರೆ.

Related posts

ಬೆಳ್ತಂಗಡಿ: ಮೇ 30 ರಂದು 11ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಜು.1ರಿಂದ ಪದ್ಯಾಣ ಭಾಗವತ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ: ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪದ್ಯಾಣ ಪ್ರಶಸ್ತಿ ಹಾಗೂ ಹಿಮ್ಮೇಳ ವಾದಕ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ,

Suddi Udaya

ಅಕ್ರಮ ಕೋಳಿ ಅಂಕ- ಧರ್ಮಸ್ಥಳ ಪೊಲೀಸರ ದಾಳಿ: ಏಳು ಆರೋಪಿಗಳ ಬಂಧನ

Suddi Udaya

ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಕುಂದು ಕೊರತೆ ಅದಾಲತ್ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಚುನಾವಣೆಯಲ್ಲಿ ಅಭೂತ ಪೂರ್ವ ವಿಜಯಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ನೂತನ ನಿದೇ೯ಶಕರುಗಳಿಗೆ ಅಭಿನಂದನೆ

Suddi Udaya

ಜೂ.17: ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ NABH ರಾಷ್ಟ್ರೀಯ ಮಾನ್ಯತೆ ಘೋಷಣೆ, ನವೀಕೃತ ಸುಧಾರಿತ ಪ್ರಯೋಗಾಲಯ ವಿಭಾಗ, ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಔಟ್ರೀಚ್ ಸೆಂಟರ್ ಉದ್ಘಾಟನೆ

Suddi Udaya
error: Content is protected !!