ಮಡಂತ್ಯಾರು: ಅಕ್ಷರ ಕರಾವಳಿ ಅಂಗನವಾಡಿ ಕೇಂದ್ರ ಬಂಗೇರಕಟ್ಟ ಸಾಲುಮರ ಮಕ್ಕಳ ಬಾಲ ಮೇಳ ಕಾರ್ಯಕ್ರಮ ಡಿ 23 ರಂದು ಜರಗಿತು.

ಗರ್ಭಿಣಿಯರಿಗೆ ಶ್ರೀಮಂತ ಕಾರ್ಯಕ್ರಮ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ಗ್ರಾಮ ಪಂಚಾಯತ್ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಮಕ್ಕಳ ತಾಯಂದಿರ ಹಾಗೂ ಸ್ತ್ರೀ ಶಕ್ತಿ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರು ಮ್ಯಾಕ್ಸಿo ಅಲ್ಬುರ್ಕ. ಕಾರ್ಯದರ್ಶಿ ವಾಸುದೇವ ಗೌಡ ಮಡಂತ್ಯಾರು , ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪ ಎ ಎಸ್. ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಸಂಗೀತ ಶೆಟ್ಟಿ, ಕಿಶೋರ್ ಕುಮಾರ್, ವಿಶ್ವನಾಥ ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಸoತಿ ಲಕ್ಷ್ಮಣ್, ಮಾಲಾಡಿ ಪಂಚಾಯತ್ ಉಪಾಧ್ಯಕ್ಷರಾದ ಸೆಲೆಸ್ಟಿನ್, ಗ್ರಾಮ ಪಂಚಾಯತ್ ಪಿ ಡಿ ಒ ಶ್ರೀನಿವಾಸ್, ರೋಟರಿ ಕ್ಲಬ್ ಸದಸ್ಯರು ಜೆರಾಲ್ಡ್ ಮಿರಾoದ, ಹಾಗೂ ಶ್ರೀ ಶಕ್ತಿ ಸಂಘದ ಸದಸ್ಯರು ಮಕ್ಕಳ ಪೋಷಕರು ಆಶಾ ಕಾರ್ಯಕರ್ತೆ ಹಾಗೂ ಸಹಾಯಕಿ ಊರಿನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











