September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಮಠದಬೈಲು ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಬೆಳ್ತಂಗಡಿ: ಲಾಯಿಲದಿಂದ ಬೆಳ್ತಂಗಡಿ ನಗರ ಸಂಪರ್ಕಿಸುವ ನಾಗರಿಕರ ಬಹು ವರ್ಷಗಳ ಬೇಡಿಕೆಯಾದ ಮಠದಬೈಲು ಎಂಬಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಡಿ.26 ರಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.

ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಕನ್ನಾಜೆ ಕಾಲು ಸಂಕ ನಿರ್ಮಾಣಗೊಳ್ಳಲಿದ್ದು ಕಾಯಿಲೆ, ಮೇಲಂತಬೆಟ್ಟು, ಸವಣಾಲು ಸೇರಿದಂತೆ ಹಲವು ಗ್ರಾಮಗಳನ್ನು ಬೆಸೆಯಲಿದೆ. ಈ ಯೋಜನೆ ಕುರಿತು ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಇಲಾಖೆ ಮಧ್ಯೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟರು ಮಾಜಿ ಸಿಎಂ ಯಡಿಯೂರಪ್ಪನವರು. ಅಭಿವೃದ್ಧಿಗೆ ಸರ್ಕಾರ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಎಂದು ಹೇಳಿದರು.

ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಪ್ರಮುಖರಾದ ಈಶ್ವರ ಬೈರ, ಯೋಗೀಶ್ ಬಿಢೆ,ದಯಾನಂದ ಶೆಟ್ಟಿ ಕನ್ನಾಜೆ ,ಗಣೇಶ್ ಸಪಲ್ಯ, ರುಕ್ಮಯ ಕನ್ನಾಜೆ, ಸುಧಾಕರ್ ಬಿ.ಎಲ್. ಸೇರಿದಂತೆ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.ಗಿರೀಶ್ ಡೋಂಗ್ರೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಆರ್ ಧನ್ಯವಾದವಿತ್ತರು.

Related posts

ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೆ

Suddi Udaya

ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪ ಕಾರ್ಯದರ್ಶಿಯಾಗಿ ಮಡಂತ್ಯಾರಿನ ಅರುಣ್ ಪುರ್ಟಾಡೊ ನೇಮಕ

Suddi Udaya

ಬೆಳ್ತಂಗಡಿ ಸ.ಪ್ರ. ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ – ಸುರಕ್ಷತೆ ಹಾಗೂ ‘ಮುಟ್ಟಿನ ನೈರ್ಮಲ್ಯ ದಿನಾಚರಣೆ’ ಜಾಗೃತಿ ಕಾರ್ಯಕ್ರಮ

Suddi Udaya

ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದಿಂದ ಸಾಧನಾ ಪ್ರಶಸ್ತಿ

Suddi Udaya

ಬೀದರ್‌ನಲ್ಲಿ ಕ್ಷೀರಕ್ರಾಂತಿ : ದೇಶಕ್ಕೆ ಮಾದರಿಯಾದ ಡಾ. ಹೆಗ್ಗಡೆಯವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆ

Suddi Udaya

ಚಾರ್ಮಾಡಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಓರ್ವ ಮಹಿಳೆ ಸಾವು, ಮಕ್ಕಳು ಸಹಿತ ನಾಲ್ವರಿಗೆ ಗಂಭೀರ ಗಾಯ

Suddi Udaya
error: Content is protected !!