ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.26 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕೊಪ್ಪದಗಂಡಿ ಎಂಬಲ್ಲಿ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗತ್ತದೆ ಇದರಿಂದ ಜನರಿಗೆ ಸಂಪರ್ಕ ಕಡಿತಗೊಂಡು ಸಮಸ್ಯೆಯಾಗುತ್ತಿದೆ ಹಾಗಾಗಿ ಅದನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಗ್ರಾಮಸ್ಥರು ಹೇಳಿದಾಗ ಸಣ್ಣ ನೀರಾವರಿ ಇಲಾಖೆಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಕಾರ್ಮಿಕರ ಇಲಾಖೆಯ ಯೋಜನೆಗಳ ಸಮಸ್ಯೆ, ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು, ಅನೇಕ ದಿನಗಳಿಂದ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ ಮತ್ತೆ ಮರುದಿನವೇ ಬೆಳಕು ಕಾಣಬೇಕು. ಕಡಿರುದ್ಯಾವರ ಮತ್ತು ಮಿತ್ತಬಾಗಿಲು ಗ್ರಾಮಕ್ಕೆ ಕೇವಲ 2 ಪವರ್ ಮ್ಯಾನ್ ಗಳಿದ್ದಾರೆ ಇದರಿಂದ ಸಮಸ್ಯೆಯಾಗುತ್ತಿದೆ ಅವರು ಕರೆ ಸ್ವೀಕರಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ವಿದ್ಯುತ್ 110 ಸಬ್ ಸ್ಟೇಷನ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ, ಕಕ್ಕಿಂಜೆಯಲ್ಲಿ ಸಬ್ ಸ್ಟೇಷನ್ ನಿರ್ಮಾಣದ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಇಲಾಖೆಯ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಗೊಳಿಸಬೇಕು ಎಂದು ಶಾಸಕರು ಸೂಚಿಸಿದರುಚಾರ್ಮಾಡಿ ವಿದ್ಯುತ್ ಪವರ್ ಪ್ರಾಜೆಕ್ಟ್ ನಿಂದ ಕಾಡಾನೆಗಳು ಕೃಷಿ ಭೂಮಿಗೆ ದಾಳಿ ನಡೆಸುತ್ತಿದೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಹೇಳಿದಾಗ ಕೆಲವೆಡೆ ನೇತಾಡುವ ಸೋಲಾರ್ ಬೇಲಿ ಅಳವಡಿಸಲಾಗಿದೆ ಇದನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.ಆನೆ, ನವಿಲುನ್ನು ಮೃಗಾಲಯದಲ್ಲಿ ಕಾಣುತ್ತಿದ್ದ ಬೆಳ್ತಂಗಡಿ ಮಂದಿಗೆ ಇಂದು ಮನೆಯಂಗಳದಲ್ಲಿ ಕಾಣಬಹುದಾದ ಪರಿಸ್ಥಿತಿ. ಪ್ರಾಯೋಗಿಕವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಚಿವರ ಗಮನಕ್ಕೆ ತರಲಾಗಿದೆ. ಇದನ್ನು ಅಳವಡಿಸಲು 40 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಕಾಡಿನಲ್ಲಿ ಹಣ್ಣುಹಂಪಲಿನ ಗಿಡ ನಾಟಿ ಮಾಡಲು ತಿಳಿಸಿದ್ದೇನೆ ಎಂದು ಶಾಸಕರು ವಿವರಿಸಿದರು.
ಅರಣ್ಯದಂಚಿನದಲ್ಲಿರುವ 40 ಕುಟುಂಬಗಳಿಗೆ ಯಾವುದೇ ಭೂ ದಾಖಲೆಗಳು ಇಲ್ಲ ಅಲ್ಲಿ ಆನೆಗಳು ಕೃಷಿ ಹಾನಿಗೊಳಿಸುತ್ತಿದೆ ಆದರೆ ಪರಿಹಾರ ಸಿಗದೆ ನಷ್ಟ ಅನುಭವಿಸುವಂತಾಗಿದೆ. ವನ್ಯ ಜೀವಿ ಜಿಂಕೆಯನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಹೇಳಿದಾಗ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಪರಿಶೀಲನೆ ನಡೆಸುವಂತೆ ಸೂಚಿಸಿದರು.ಮನೆ ನಿರ್ಮಿಸಲು ನಮ್ಮಿಂದ ಸಾಧ್ಯವಿಲ್ಲ, ನಮಗೆ ಯಾವುದೇ ಭೂ ದಾಖಲೆಗಳಿಲ್ಲ ಎಂದು ಮಹಿಳೆಯೊಬ್ಬರು ಶಾಸಕರ ಗಮನಕ್ಕೆ ತಂದಾಗ ನಿವೇಶನ ರಹಿತರ ಪಟ್ಟಿಗೆ ಇವರ ಹೆಸರು ಸೇರಿಸಿ ವಸತಿ ಯೋಜನೆ ಒದಗಿಸುವಂತೆ ಅಧಿಕಾರಿಗಳು ಕ್ರಮ ವಹಿಸಿ, ಅವರಿಗಾಗಿ ನಿಗಮದ ಕೆಲಸವನ್ನು ನನ್ನ ಹಂತದಲ್ಲಿ ಮಾಡಿ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಶಾಸಕರು ತಿಳಿಸಿದರು.
ವಿಶೇಷಚೇತನ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ತಾಲೂಕು ಪಂಚಾಯತ್ ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಅಧ್ಯಕ್ಷೆ ರತ್ನಾವತಿ, ಉಪಾಧ್ಯಕ್ಷೆ ಸಾವಿತ್ರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬಸಸ್ಪ, ಸದಸ್ಯರು ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.











