September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಪಿ ಎಂ ಶ್ರೀ ಮಾದರಿ ಶಾಲೆಯಲ್ಲಿ ನಾಗರಿಕ ಹಕ್ಕುಗಳು ಮತ್ತು ಕರ್ತವ್ಯಗಳ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ : ಪಿ ಎಂ ಶ್ರೀ ಯೋಜನೆಯಡಿಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮದಡಿಯಲ್ಲಿ ನಾಗರಿಕ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ವಿಷಯದ ಬಗ್ಗೆ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಖ್ಯಾತ ವಕೀಲರಾದ ಶ್ರೀಯುತ ಬಿ.ಕೆ ಧನಂಜಯ ರಾವ್ ಮಾಹಿತಿಯನ್ನು ನೀಡಿದರು.

ನಮಗೆ ಸಂವಿಧಾನ ನೀಡಿರುವ ಹಕ್ಕುಗಳಿಗೆ ಎಷ್ಟೋ ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯವಾದೇ ನಾಗರಿಕ ಕರ್ತವ್ಯಗಳು ಇದೆ. ನಾವು ನೆಲ, ಜಲ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ, ವನ್ಯ ಜೀವಿಗಳ ರಕ್ಷಣೆ, ಸಾರ್ವಜನಿಕ ಸಂಪತ್ತುಗಳ ರಕ್ಷಣೆ ಮತ್ತು ದೇಶ ಕಾಯುವ ಸೈನಿಕರಿಗೆ ಗೌರವ ಹಾಗೂ ಭಾಷೆ, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಉಳಿಸುವ ಕಾರ್ಯವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಝಮೀರುದ್ದೀನ್, ಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯನಾರಾಯಣ ಪುತ್ತೂರಾಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನೀನಾ ಕುಮಾರ್ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

Related posts

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ನಾರಾವಿ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’ – ಚಿನ್ನದ ಆಭರಣಗಳು 0%, VA/ಮೇಕಿಂಗ್ ನಲ್ಲಿ 100% ರಿಯಾಯಿತಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾಯ೯ಕಾರಿಣಿ ಸಭೆ

Suddi Udaya

ಕಳೆಂಜ: ಬರೆಮೇಲು ನಿವಾಸಿ ಗಣಪನ ಗೌಡ ನಿಧನ

Suddi Udaya

ಇಂದಬೆಟ್ಟು ಶ್ರೀ ವೀರಭದ್ರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಉಜಿರೆ: ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!