September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

ವೇಣೂ: ಯೇಸು ಸ್ವಾಮಿ ಬೋಧಿಸಿದ ಪ್ರೀತಿ, ಕರುಣೆ ,ಕ್ಷಮೆಮತ್ತು ಮಾನವೀಯತೆಯನ್ನುನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವೇಣೂರು ಚರ್ಚಿನ ಧರ್ಮಗುರುಗಳಾದ ವಂ।ಸ್ವಾಮಿ ಎಡ್ವಿನ್ ಸಂತೋಷ್ ಮೋನಿಸ್ ಹೇಳಿದರು.

ಅವರು ವೇಣೂರಿನಲ್ಲಿ ಜರಗಿದ ಕ್ರಿಸ್ಮಸ್ ಸೌಹಾರ್ದ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ್ದರು.ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ ಅರವಿಂದ ಚೊಕ್ಕಾಡಿ, ಖತೀಬರಾದ ಜ।ಮುಹಮ್ಮದ್ ಔಹರ್ ಅಹ್ ಹನಿ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕಾಶಿನಾಥ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಭಾಗವಹಿಸಿದ್ದರು.

ಚರ್ಚ್ ಉಪಾಧ್ಯಕ್ಷ ಡೆನಿಸ್ ಸಿಕ್ವೇರ ಸ್ವಾಗತಿಸಿದರು.ಕಾರ್ಯದರ್ಶಿ ಶ್ರೀಮತಿ ಜೆತ್ರುದ್ ಡಿ ಸೋಜ ವಂದಿಸಿದರು. ಶಿಕ್ಷಕ ವಿನೋದ್ ಮೋನಿಸ್ ನಿರ್ವಹಿಸಿದರು. ವಿವಿಧ ಧರ್ಮಗಳ ಗಣ್ಯರು ಉಪಸ್ಥಿತರಿದ್ದರು. ಸ್ಥಳೀಯ ಕೆಥೋಲಿಕ್ ಸಭಾ ಅಧ್ಯಕ್ಷ ಅರುಣ್ ಡಿ ಸೋಜ, ಐಸಿವೈಎಂ ಅಧ್ಯಕ್ಷೆ ಕು।ಜೆಸ್ವಿನ್ ಲೋಬೊ, ಚರ್ಚಿನ ಮಾಜಿ ಉಪಾಧ್ಯಕ್ಷರಾದ ಎಲ್ ಜೆ ಫೆರ್ನಾಂಡಿಸ್ ಮತ್ತು ತೋಮಸ್ ರೆಮಿ ನೊರೋನ್ಹ ಸಹಕರಿಸಿದರು.
ವರದಿ: ಹೆಚ್ ಮಹಮ್ಮದ್

Related posts

ಮಂಗಳೂರು ವಿವಿ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯಾಟ : ಉಜಿರೆಯ ಎಸ್‌.ಡಿ.ಎಂ ಚಾಂಪಿಯನ್ಸ್

Suddi Udaya

ಉಜಿರೆ ಶೀತಲ್ ಗಾರ್ಡನ್ ನಲ್ಲಿ ಸುಸಜ್ಜಿತವಾದ ವಿಜಯ ಸಭಾಭವನ ಉದ್ಘಾಟನೆ

Suddi Udaya

ಉಜಿರೆಯ ಮುಹಮ್ಮದ್ ನಿಶ್ವಾನ್ ರವರಿಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ’ ತರಬೇತಿ: ಅರ್ಜಿ ಆಹ್ವಾನ

Suddi Udaya

ಸುಲ್ಕೇರಿ: ಇರಂತೊಟ್ಟು ಹೊಸಮನೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya
error: Content is protected !!