September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ

ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಪುರುಷರಬೆಟ್ಟು ಎಂಬಲ್ಲಿ ಡಿ.27 ರಂದು ನಡೆದಿದೆ.

ಕಾಣೆಯಾದ ವ್ಯಕ್ತಿ ಜಿನ್ನಪ್ಪ ಗೌಡರ ಹಿರಿಯ ಪುತ್ರ ರಾಜೇಶ್ ಪಿ. (30ವ) ಅವರು ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು, ಬಳಿಕ ವಾಪಾಸು ಊರಿಗೆ ಬಂದು ಕೆಲಸವಿಲ್ಲದೆ ತಂದೆ-ತಾಯಿಯ ಜೊತೆಗೆ ಮನೆಯಲ್ಲಿ ವಾಸವಿದ್ದರು, ಡಿ. 27 ರಂದು ಅವರ ತಮ್ಮ ಪ್ರಶಾಂತ್ ಪಿ ಅವರು ರಜೆಯ ಕಾರಣ ಮನೆಗೆ ಬಂದಾಗ ಅಣ್ಣ ರಾಜೇಶ್ ಕಾಣದಿರುವುದನ್ನು ತಾಯಿಯಲ್ಲಿ ವಿಚಾರಿಸಿದಾಗ ಅವನು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಂದಿರುವುದಿಲ್ಲವಾಗಿ ತಿಳಿಸಿದರು. ಅವರ ಮೊಬೈಲ್‌ಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ, ನೆರೆ ಮನೆ, ಸಂಬಂಧಿಕರಿಗೆ ವಿಚಾರ ತಿಳಿಸಿ ಮನೆಯ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ, ರಾತ್ರಿ ಸಮಯ ಮನೆಗೆ ಬರಬಹುದೆಂದು ಕಾದು ನೋಡಿದರೂ ಈವರೆಗೆ ವಾಪಾಸು ಮನೆಗೆ ಬಾರದೇ ಇರುವುದರ ಕುರಿತು ಅವರನ್ನು ಪತ್ತೆ ಹಚ್ಚಿಕೊಡಬೇಕು ಎಂದು ತಮ್ಮ ಪ್ರಶಾಂತ್ ಪಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

ಸಾಧರಣ ಶರೀರ, 5.6 ಅಡಿ ಎತ್ತರ, ಕಪ್ಪು ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಬರ್ಮುಡ ಧರಿಸಿದ್ದು ತುಳು, ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ.೮೨/೨೫ ಕಲಂ ಅಡಿ ಮನುಷ್ಯ ಕಾಣೆಯಾಂತೆ ದೂರು ದಾಖಲಾಗಿದೆ.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya

ಬಂಗಾಡಿ-ಕೊಲ್ಲಿ ಒಂದು ವಾರದಿಂದ 3 ಫೇಸ್ ವಿದ್ಯುತ್ ಇಲ್ಲದೆ ಕೃಷಿಕರಿಗೆ ಸಂಕಷ್ಟ: ಕೂಡಲೇ ಕ್ರಮ ಕೈಗೊಳ್ಳುವಂತೆ ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ ಆಗ್ರಹ

Suddi Udaya

ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವಿಶೇಷ ಕಾರ್ಯಕಾರಣಿ ಸಭೆಗೆ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಭೇಟಿ

Suddi Udaya

ಕಾಪಿನಡ್ಕ: ರಸ್ತೆ ಅಪಘಾತದಲ್ಲಿ ದೊಡ್ಡ ದುರಂತವನ್ನು ತಪ್ಪಿಸಿದ ಟಿಪ್ಪರ್ ಚಾಲಕ,

Suddi Udaya
error: Content is protected !!