23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.11: “ಆಸರೆ” ಸ್ಕಾಲರ್ ಶಿಪ್ ಪರೀಕ್ಷೆ , ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅವಕಾಶ : ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ಪಿಯುಸಿ ಶಿಕ್ಷಣಕ್ಕೆ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಉಚಿತ ದಾಖಲಾತಿ

ಬೆಳ್ತಂಗಡಿ: ವಿದ್ಯಾದಾನ ಶ್ರೇಷ್ಠ ದಾನ ಎಂಬ ಮಾತಿದೆ. ಅದರಂತೆ ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ನಿಟ್ಟಡೆಯಲ್ಲಿರುವ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಈವರೆಗೆ ನೂರಾರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುತ್ತಾ ಬಂದಿದೆ. 12 ಮಕ್ಕಳಿಂದ ಆರಂಭವಾಗಿದ್ದ ಶಾಲೆ ಇಂದು 850ಕ್ಕೂ ಅಧಿಕ ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಎಲ್ ಕೆಜಿಯಿಂದ ಹತ್ತನೇ ತರಗತಿ ಮತ್ತು ಪಿಯುಸಿ ಕಾಲೇಜು ಶಿಕ್ಷಣ ನೀಡಲಾಗುತ್ತಿದೆ. ಗುರುಕುಲ ಪದ್ಧತಿಯಲ್ಲಿ ನೀಡುವ ಶಿಕ್ಷಣ ಮತ್ತು ಸತತ 12ನೇ ಬಾರಿ ಎಸ್ಎಸ್ಎಲ್ ಸಿಯಲ್ಲಿ ಹಾಗೂ ಸತತ 4ನೇ ಬಾರಿ ಪಿಯುಸಿಯಲ್ಲಿ ಶೇ. 100 ಫಲಿತಾಂಶವನ್ನು ಗುರುತಿಸಿ ಸಂಸ್ಥೆಗೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿರುವುದು ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಅಚ್ಚಾಗಿ ದಾಖಲೆ ನಿರ್ಮಿಸಿದೆ ಎಂದು ಕುಂಭ ಶ್ರೀ ಶಾಲಾ ಸಂಚಾಲಕ ಅಶ್ವಿತ್ ಕುಲಾಲ್ ಹೇಳಿದರು.

ಅವರು ಡಿ 29ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಜನವರಿ 11ರಂದು ಆಸರೆ ಸ್ಕಾಲರ್‌ಶಿಪ್ ಟೆಸ್ಟ್: ಪ್ರತೀ ವರ್ಷ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಸಂಸ್ಥೆ ಈಗ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಕುಂಭಶ್ರೀ ವಿದ್ಯಾಸಂಸ್ಥೆಯು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಆಸರೆ ಎಂಬ ಸ್ಕಾಲರ್‌ಶಿಪ್ ಟೆಸ್ಟ್ (ವಿದ್ಯಾರ್ಥಿವೇತನ ಪರೀಕ್ಷೆ) ಎಂಬ ಪರೀಕ್ಷೆಯನ್ನು ಆಯೋಜಿಸಿದ್ದು, ಇದರಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ಪಿಯುಸಿ ಶಿಕ್ಷಣಕ್ಕೆ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಉಚಿತ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ನಗದು ಮತ್ತು ಪಾರಿತೋಷಕ ನೀಡುಲಾಗುತ್ತದೆ.

11-01-2026ರಂದು ಈ ಆಸರೆ ಸ್ಕಾಲರ್‌ಶಿಪ್ ಟೆಸ್ಟ್ ನಡೆಯಲಿದ್ದು, ಪರೀಕ್ಷಾ ಅವಧಿ 1.30 ಗಂಟೆ ಇರುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲೂ ಬರೆಯಲು ಅವಕಾಶವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್,ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಶುಭ ನಿತೇಶ್,ಉಪ ಮುಖ್ಯೋಪಾಧ್ಯಾಯಿನಿ ಅಕ್ಷತಾ, ಪದ್ಮನಾಭ ಕುಲಾಲ್ ಉಪಸ್ಥಿತರಿದ್ದರು.

Related posts

ತುಲು ಕಥೆ ಬರಹಗಾರರಿಗೆ ಸುವರ್ಣ ವೇದಿಕೆ; “ಕುದ್ಕ ಬಚ್ಚಿರೆ” ತುಲು ಸಣ್ಣ ಕಥಾ ಸ್ಪರ್ಧೆ: 10 ವಿಜೇತರಿಗೆ ನಗದು ಬಹುಮಾನ

Suddi Udaya

ಹತ್ಯಡ್ಕ: ಕಾಂಗ್ರೆಸ್ ಬೂತ್ ಕಾರ್ಯಕರ್ತರ ಸಭೆ

Suddi Udaya

ಪುಂಜಾಲಕಟ್ಟೆ : ಆಟೋ ಚಾಲಕರಿಂದ ರಿಕ್ಷಾ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆ ಬೋರ್ಡ್ ಅಳವಡಿಕೆ

Suddi Udaya

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ಕೇಶವ ಪೂಜಾರಿಗೆ ಶಿಕ್ಷೆ ಪ್ರಕಟ

Suddi Udaya

ನಾಗಸ್ವರ ವಾದಕ ಸತೀಶ್‌ ಪೂಜಾರಿಗೆ ಅಳದಂಗಡಿ ಅರಸರಿಂದ ಗೌರವ

Suddi Udaya

ಬಂದಾರು ಸಿದ್ಧಿ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಚೇರಿ ಉದ್ಘಾಟನೆ

Suddi Udaya
error: Content is protected !!