ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬುರುಡೆ ಪ್ರಕರಣ ವರದಿಯ ಆದೇಶ ಮತ್ತೆ ಜ.3ಕ್ಕೆ ಮುಂದೂಡಿದ ಕೋರ್ಟ್

ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣ ಬಗ್ಗೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್ ಗೆ 215 ಅಡಿಯಲ್ಲಿ ವರದಿಯನ್ನು ಸಲ್ಲಿಸಿದ ಆದೇಶವನ್ನು ಡಿ.26 ಕ್ಕೆ ನಿಗದಿಪಡಿಸಲಾಗಿತ್ತು. ಆದ್ರೆ ಆದೇಶವನ್ನು ಡಿ.29 ಕ್ಕೆ ಮುಂದೂಡಿತ್ತು ಇದೀಗ ಮತ್ತೆ ಆದೇಶವನ್ನು ಜ.3 ಕ್ಕೆ ಬೆಳ್ತಂಗಡಿ ನ್ಯಾಯಾಲಯ ಮುಂದೂಡಿದೆ.

ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20 ರಂದು ‘ಸುಳ್ಳು ಸಾಕ್ಷಿ’ ವರದಿಯನ್ನು (u/s)215 ಅಡಿಯಲ್ಲಿ ಚಿನ್ನಯ್ಯ , ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ವಿಠಲ್ ಗೌಡ, ಸುಜಾತ ಭಟ್ ವಿರುದ್ಧ ದೂರು ಸಲ್ಲಿಸಿದ್ದರು.

ಈ ವರದಿಯ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಅವರು ವಿಚಾರಣೆ ನಡೆಸಿ ಡಿ.26 ರಂದು ಆದೇಶದಿಂದ ಡಿ.29 ಕ್ಕೆ ಮುಂದೂಡಿತ್ತು. ಮತ್ತೆ ಇದೀಗ ಜ.3 ಕ್ಕೆ ಆದೇಶವನ್ನು ಮುಂದೂಡಿದೆ.

ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Related posts

ಉಜಿರೆ: ಎಸ್. ಡಿ. ಎಂ ಅಂತರ್ ಕಾಲೇಜು ಗೂಡುದೀಪ ಸ್ಪರ್ಧೆ

Suddi Udaya

ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ : ವೇಣೂರು ನವಚೇತನ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಶಿಶಿಲ: ಹೇವಾಜೆ ಶಾಲೆಯ ಹಿಂಬದಿ ಗುಡ್ಡ ಜರಿತ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ “ಅನಿಮಲ್ ಫಾರ್ಮ್” ಚಲನ ಚಿತ್ರ ಪ್ರದರ್ಶನ

Suddi Udaya

ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟದ ಸಭೆ

Suddi Udaya

ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya
error: Content is protected !!