32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾಳ: ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ನಾಳ: ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮಸ್ಥರಿಗೋಸ್ಕರ ಏರ್ಪಡಿಸಿದ ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟವು ನಾಳ ದೇವಸ್ಥಾನದ ಗದ್ದೆಯಲ್ಲಿ ಡಿ.28ರಂದು ಜರುಗಿತು.

ಸತೀಶ್ ದೀಪ ಬೆಳಗಿಸುವುದರ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘಟಕರಾದ ಕಿರಣ್ ರಾವ್, ನಿತಿನ್ , ಸುರೇಶ್ ಪೂಜಾರಿ, ಸುರೇಶ್ ಗೌಡ ಕಲಾಯಿದೊಟ್ಟು ಇನ್ನಿತರರು ಉಪಸ್ಥಿತರಿದ್ದರು.

ಹರೀಶ್ ರಾವ್ ಮಾಲಕತ್ವದ ಸಾಯಿ ರಾಮ್ ಫ್ರೆಂಡ್ಸ್ ನಾಳ, ಸುಧೀರ್ ರವರ ವಿಘ್ನೇಶ್ ಪವರ್, ಗಣೇಶ್ ನಾಳ ರವರ ನೀಲವೇಣಿ, ಪ್ರಣೀತ್ ರವರ ಶ್ರೀ ದುರ್ಗಾ ಫ್ರೆಂಡ್ಸ್, ಪ್ರಸಾದ್ ಮಾಲಕತ್ವದ ಶ್ರೀ ರಾಮ್ ಫ್ರೆಂಡ್ಸ್ ಗೇರುಕಟ್ಟೆ ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಶ್ರೀ ರಾಮ್ ಫ್ರೆಂಡ್ಸ್ ಗೇರುಕಟ್ಟೆ, ದ್ವಿತೀಯ ಬಹುಮಾನವನ್ನು ಶ್ರೀ ದುರ್ಗಾ ಫ್ರೆಂಡ್ಸ್ ನಾಳ ಪಡೆದುಕೊಂಡಿರುತ್ತದೆ. ಬೆಸ್ಟ್ ಬ್ಯಾಟ್ಸ್ಮನ್ ಆಗಿ ಸನತ್, ಬೆಸ್ಟ್ ಬೌಲರ್ ಆಗಿ ಯೋಗೀಶ್ ಎಸ್ ಆರ್ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಂದೀಪ್ ನಾಳ ಮುಡಿಗೇರಿಸಿಕೊಂಡಿದ್ದಾರೆ.

Related posts

ಬೆಳ್ತಂಗಡಿ: ನಿವೃತ್ತ ಶಿಕ್ಷಕ, ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ನಿಧನ

Suddi Udaya

ಲೋಕಸಭೆ ಚುನಾವಣೆ: ಬಿಜೆಪಿ ಎರಡನೇ ಪಟ್ಟಿ ಪ್ರಕಟ: ದ.ಕ. ಜಿಲ್ಲೆಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಕಡಿರುದ್ಯಾವರ : ಕುಕ್ಕಾವು ಶಾಲೆಗೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಬಟ್ಟಲು ವಿತರಣೆ

Suddi Udaya

ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಅನುದಾನ ಮತ್ತು ತಾಲೂಕಿನ ಮೂರು ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್‌ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಶಿಕ್ಷಣ ಸಚಿವರಿಗೆ ಮನವಿ

Suddi Udaya

ಕಪಿಲಾ ನದಿ ಕಿರು ಸೇತುವೆ ದುರಸ್ತಿ ಸಮಿತಿ ಜಮೆ-ಖರ್ಚುಗಳ ಸಭೆ

Suddi Udaya

ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕರಿಂದ ಅಗೇಲು ಸೇವೆ: ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರಿಂದ ಬೊಳ್ಳಜ್ಜನಿಗೆ ಅಗೇಲು ಸಮರ್ಪಣೆ

Suddi Udaya
error: Content is protected !!