September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ ಜನಸ್ಪಂದನ ಸಭೆ: ಶಿಶಿಲ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾದ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ – ಶಾಸಕ ಹರೀಶ್ ಪೂಂಜ

ಶಿಶಿಲ: ಶಿಶಿಲ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ. 30 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಜಿಪಿಎಸ್ ಫೋಟೋ ತೆಗೆದರೆ ಮೂಲರಹಳ್ಳಿ ಎಂದು ಬರುತ್ತಿದೆ ನಮ್ಮ ಶಿಶಿಲ ಮೂಡಿಗೆರೆ ತಾಲ್ಲೂಕಿನಲ್ಲಿದೆಯಾ ಎಂದು ಗ್ರಾಮಸ್ಥರು ಹೇಳಿದಾಗ ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒಗೆ‌ ಪತ್ರ ಬರೆಯಲು ಶಾಸಕರು ಸೂಚಿಸಿದರು.

10.30 ಗಂಟೆ ಬರುತ್ತಿದ್ದ ಸಾರಿಗೆ ಬಸ್ ಇದೀಗ ಓಡಾಟ ನಿಲ್ಲಿಸಿದೆ. ಈಗಿರುವ ಬಸ್ಸುಗಳು ಶಿಶಿಲದಲ್ಲಿ ನಿಲ್ಲುತ್ತದೆ ಅದು ಹೊಳೆಗುಂಡಿ ಹೋಗಬೇಕು, ನಮ್ಮ ಮೊದಲಿನ ಪೊಸ್ಟ್ ಬಸ್ ಎಂದೇ ಪ್ರಸಿದ್ಧಿಯಾಗಿರುವ ಬಸ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಹೇಳಿದಾಗ ಈ ವಿಚಾರದ ಕುರಿತು ಕೆಎಸ್ಆರ್ಟಿಸಿ ಡಿಸಿ ಯೊಂದಿಗೆ ಮಾತುಕತೆ ನಡೆಸಿ 10 ದಿನದೊಳಗೆ ಪ್ರತಿಕ್ರಿಯೆ ನೀಡಲಾಗುವುದು. ಗ್ಯಾರಂಟಿ ಯೋಜನೆಯಿಂದ ಡಿಪ್ಪೋಗೆ ಇದುವರೆಗೆ ಯಾವುದೇ ಹೊಸ ಬಸ್ ಗಳು ಬಂದಿಲ್ಲ ಎಂದು ಶಾಸಕರು ತಿಳಿಸಿದರು.

ಅರಣ್ಯ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿಕೊಂಡು ನಮ್ಮ ವರ್ಗ ಭೂಮಿಯ ವರೆಗೆ ನಡೆಸಿದೆ ಇದರಿಂದ ನಮಗೆ ಸಮಸ್ಯೆಯಾಗಿತ್ತು ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಕಳೆಂಜದ ಗ್ರಾಮದ 309 ಸರ್ವೇ ನಂಬರ್ ನಲ್ಲಿ ಸರ್ವೇ ನಡೆಸುವುದರಿಂದ ಗಡಿ ಗುರುತು ಪರಿಕ್ಷರಣೆಗಾಗಿ ಕೆಲ ಜಾಗದ ಗಡಿಯವರೆಗೆ ಸರ್ವೇ ನಡೆಸಲಾಗಿದೆ. ಸರ್ವೆ ಕಾರ್ಯ ನಡೆಸುತ್ತಿರುವುದು ಸರ್ವೆ ಇಲಾಖೆಯವರ ಜವಾಬ್ದಾರಿ, ಸ್ಥಳೀಯರಿಗೆ ಮಾಹಿತಿ ಅಥವಾ ನೋಟೀಸ್ ನೀಡುವ ಜವಾಬ್ದಾರಿ ಅವರದ್ದು ನಾವು ನಮ್ಮ ಗಡಿಯನ್ನು ತೋರಿಸುವುದು ನಮ್ಮ ಕೆಲಸ ಎಂದು ಅರಣ್ಯಾಧಿಕಾರಿಗಳು ಪ್ರತಿಕ್ರಿಯೆ ನೀಡಿದರು.

ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಾಲಯದ ಕಪಿಲ ನದಿಗೆ ಸೇತುವೆ ನಿರ್ಮಾಣಕ್ಕೆ 2. ಕೋಟಿ 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಈ ಅನುದಾನದಲ್ಲಿ ಸೇತುವೆ ನಿರ್ಮಣವಾಗುತ್ತಾ, ಮಾಡುವುದಾದರೆ ಸಾರ್ವಜನಿಕರಿಗೆ ಉಪಯೋಗಯಾಗುವ ನಿಟ್ಟಿನಲ್ಲಿ ನಿರ್ಮಾಣವಾಗಲಿ ಎಂದು ಗ್ರಾಮಸ್ಥರು ಹೇಳಿದಾಗ ಪಿಡಬ್ಲ್ಯೂಡಿ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆಗೊಂಡ ಬಗ್ಗೆ ಮಾಹಿತಿ ಬಂದಿಲ್ಲ. ಕಳೆದ ಅವಧಿಯಲ್ಲಿ 10 ಕೋಟಿ ರೂಪಾಯಿ ವೆಚ್ಚ ಸೇತುವೆ ನಿರ್ಮಾಣಕ್ಕೆ ಸರ್ವೇ ನಡೆಸಲಾಗಿದೆ. ಇದುವರೆಗೂ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದ ಬಗ್ಗೆ ಯಾವುದೇ ಇಲಾಖೆಯಿಂದ ಅಧಿಕೃತ ಆದೇಶ ಬಂದಿಲ್ಲ ಎಂದು ಶಾಸಕರು ಸ್ಪಷ್ಟನೆ ನೀಡಿದರು.

ಅನುದಾನ ಬಿಡುಗಡೆಯ ಆದೇಶ ಬಾರದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಇತ್ತೀಚೆಗೆ ಶಿಶಿಲ ಪರಿಸರದಲ್ಲಿ ಕಾಡಾನೆಯೊಂದು ಗಾಯಗೊಂಡಿದ್ದ ಬಗ್ಗೆ ಅರಣ್ಯ ಇಲಾಖೆ ಆನೆ ಮೇಲೆ ನಿಗಾ ವಹಿಸಿದೆ ಆದರೆ ಎಷ್ಟು ಹುಡುಕಿದರೂ ಆನೆ ಪತ್ತೆಯಾಗಿಲ್ಲ ಈಗಾಲೂ ಅದನ್ನು ಟ್ರೆಸ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ತಿಳಿಸಿದರು.

ಬದಿಗುಡ್ಡೆ ಎಂಬಲ್ಲಿ ಮಳೆಗಾಲದಿಂದ ಇದುವರೆಗೆ ನಮಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಮನವಿ ಸಲ್ಲಿಸಿದರೂ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ತಾತ್ಕಾಲಿಕವಾಗಿ ಕೊಳವೆ ಬಾವಿ ಕೊರೆಸಿ ಕೊಡಲಾಗುವುದು ಎಂದು ಶಾಸಕರು ತಿಳಿಸಿದರು.

ಬದಿ ಗುಡ್ಡೆ ಬಳಿ 94 ಸಿ ಕಡತ ವಿಲೇವಾರಿ ಯಾಗದೇ ಇರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಯಿತು.

ರಸ್ತೆ ಬದಿ ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿದೆ, ಅಪಾಯಕಾರಿ ಮರ ತೆರವು, ಮೊಬೈಲ್ ನೆಟ್ವರ್ಕ್ ಸಮಸ್ಯ, ಸೇತುವೆ, ತಡೆಗೋಡೆ, ರಸ್ತೆ ದುರಸ್ತಿ , 94/ಸಿ, ಅಕ್ರಮ ಸಕ್ರಮ, ಬೆಳೆ ವಿಮೆ ಜಮೆ, ಕಾರ್ಯ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಶಿಶಿಲ ಗ್ರಾಮ ಪಂಚಾಯಿತಿ ವಾಣಿಜ್ಯ ಕಟ್ಟಡದಲ್ಲಿ ಮಳೆಮಾಪನವಿದೆ ಅದು ಸರಿಯಿಲ್ಲ ಅದಕ್ಕೆ ಮೇಲ್ಛಾವಣಿ ಹಾಕಲಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ದುರಸ್ತಿ ಕಾರ್ಯದ ಟೆಂಡರ್ ಹಂತ ಪ್ರಕ್ರಿಯೆಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಕಾಡಾನೆ, ಕಾಡುಹಂದಿ, ಕೋತಿ, ನವಿಲು ಕಾಡು ಪ್ರಾಣಿಗಳ ಉಪಟಳವಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್, ಉಪಾಧ್ಯಕ್ಷ ಯಶೋಧರ ಕೆ.ವಿ., ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಕಂದಾಯ ನಿರೀಕ್ಷಕ ಪಾವಡಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಸದಸ್ಯರು, ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಸೇವಾ ನಿವೃತ್ತಿಗೊಳ್ಳುತ್ತಿರುವ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡೆಂಗ್ಯೂ ತಡೆಗಟ್ಟುವ ಅಭಿಯಾನ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya

ಭಾರಿ ಗಾಳಿ ಮಳೆಗೆ ಹಾನಿಗೀಡಾದ ಮನೆ, ಶಾಲೆ, ಮದರಸಗಳಿಗೆ ನಾವೂರು ಗ್ರಾ.ಪಂ ನಿಂದ ಭೇಟಿ ಪರಿಶೀಲನೆ

Suddi Udaya

ಕೊಕ್ಕಡ: ಅಡ್ಡೈ ಶ್ರೀ ಶಿವಶಕ್ತಿ ಭಜನಾ ಮಂದಿರ ಇದರ ನೂತನ ಭಜನಾ ಮಂದಿರಕ್ಕೆ ಶಿಲಾನ್ಯಾಸ

Suddi Udaya

ಉಜಿರೆ : ಶ್ರೀ.ಧ.ಮಂ ಆಂ.ಮಾ. ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya
error: Content is protected !!