22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಬಾಜೆ ಜನಸ್ಪಂದನ ಸಭೆ

ಶಿಬಾಜೆ: ಶಿಬಾಜೆ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಡಿ. 30 ರಂದು ಪೆಲ೯ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

ಸರ್ವೇ ನಂಬರ್ 171ರಲ್ಲಿ ಕಂದಾಯ ಇಲಾಖೆ ಗ್ರಾಮ ಪಂಚಾಯತ್ ಗೆ ಸ್ಥಳ ಕಾಯ್ದಿರಿಸಲಾಗಿತ್ತು ಆದರೆ ಇದೀಗ ಅರಣ್ಯ ಇಲಾಖೆ ಹಾಗೂ ಖಾಸಗಿ ವ್ಯಕ್ತಿಯೊಬ್ಬರು ಜಾಗದಲ್ಲಿ ತಕಾರಾರು ನಡೆಸುತ್ತಿದ್ದಾರೆ. 15 ಸೆಂಟ್ಸ್ ಜಾಗವನ್ನು ಸಶ್ಮಾನ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ ನಮಗೆ ಸ್ಮಶಾನದ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಹೇಳಿದರು.

ಅರಣ್ಯ ಇಲಾಖೆ ಯಾವುದೇ ತಕಾರಾರು ಇಲ್ಲ. ಶಿಘ್ರವೇ ಸರ್ವೇಯರ್, ಅಧಿಕಾರಿಗಳು, ಪೋಲಿಸ್ ಭದ್ರತೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಗಡಿ ಗುರುತು ಮಾಡಿ ಮಹಜರು ನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಸರ್ವೇ ನಂಬರ್ 184 ರಲ್ಲಿ 80 ಮನೆಗಳಿದ್ದು ಅಲ್ಲಿಯ ಭೂಮಿ ವಾರಿಸುದಾರರಿಗೆ ಪಹಣಿಯಾಗಿದೆ ಆದರೆ ಅರಣ್ಯ ಇಲಾಖೆ ಒತ್ತುವರಿ ನಡೆಸಿದ ಜಾಗಗಳನ್ನು ತೆರವುಗೊಳಿಸುತ್ತಿದೆ ಇದರಿಂದ ಜನಸಾಮಾನ್ಯರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು. ಅತಿಕ್ರಮಣಗೊಂಡ ಸ್ಥಳವನ್ನು ಪರಿಶೀಲನೆ ನಡೆಸಿ ತೆರವುಗೊಳಿಸವುದಾಗಿ ಅಧಿಕಾರಿಗಳು ತಿಳಿಸಿದರು.

ಜೆಜೆಎಂ ಕಾಮಗಾರಿ ಗ್ರಾಮ ವ್ಯಾಪ್ತಿಯಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಪ್ರಾರಂಭವಾಗಿಲ್ಲ, ಪೈಪು ಲೈನ್, ನಳ್ಳಿ ಹಾಕಿಲ್ಲ, ಅಪೂರ್ಣವಾಗಿ ಜೆಜೆಎಂ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು, ಸಮರ್ಪಕವಾಗಿ ನಡೆಯದೇ ಪಂಚಾಯತ್ ಹಸ್ತಾಂತರ ತೆಗೆದುಕೊಳ್ಳಬಾರದು ಎಂದು ಶಾಸಕರು ಸೂಚನೆ ನೀಡಿದರು.
ಕಾಡಾನೆ ಹಾವಳಿಗೆ ನೀರಲದಲ್ಲಿ ಸೋಲಾರ್ ಬೇಲಿ ಅಳವಡಿಸಬೇಕು.17 ಕಿ.ಮಿ. ಉದ್ದದ ಸೋಲಾರ್ ಬೇಲಿ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ತಾಲೂಕು ಕಚೇರಿಯಲ್ಲಿ ಗ್ರಾಮದ ಕೆಲ ಮಂದಿಯ ಕಡತಗಳು ಕಳೆದುಹೋಗಿದೆ ಕಂದಾಯ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ, ಸದಸ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ಲೋವಲ್ಟೇಜ್ ಸಮಸ್ಯೆ, ನೆಟ್ವರ್ಕ್ ರಸ್ತೆ ದುರಸ್ತಿ ಬಗ್ಗೆ ಸಾರ್ವಜನಿಕರು ಹೇಳಿದರು.

ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಕಂದಾಯ ನಿರೀಕ್ಷಕ ಪಾವಡಪ್ಪ, ಅಧ್ಯಕ್ಷೆ ರತ್ನಾ, ಉಪಾಧ್ಯಕ್ಷ ದಿನಕರ್ ಕುರುಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್, ಸದಸ್ಯರು, ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

Suddi Udaya

ಕಳಿಯ : ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 50453 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ

Suddi Udaya

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ ನಿಧನ

Suddi Udaya
error: Content is protected !!