25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಲವಂತಿಗೆ -ಮಿತ್ತಬಾಗಿಲು ನಲ್ಲಿ “ಸ್ವ ಸಹಾಯ ಸಂಘಗಳ” ಉದ್ಘಾಟನೆ

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಹಳೇಕೋಟೆ ಇದರ ವತಿಯಿಂದ ವಾಣಿ “ಸ್ವ ಸಹಾಯ ಸಂಘಗಳ” ಉದ್ಘಾಟನೆಯನ್ನು ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಯ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಮಲವಂತಿಗೆ ಮತ್ತು ಮಿತ್ತಬಾಗಿಲು ಗ್ರಾಮದಲ್ಲಿ ದೀಪ ಪ್ರಜ್ವಲನ ಮೂಲಕ ಸಂಘ ದ ಪುಸ್ತಕ ಬಿಡುಗಡೆ ಮೂಲಕ ಸ್ವ-ಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು.

ಗುಂಡೀರು ರವಿಚಂದ್ರ ಗೌಡ ಮತ್ತು ಆನಂದ ಗೌಡ ಮೈರ್ನೋಡಿ ಮನೆಯಲ್ಲಿ ನಡೆದ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಮಾಧವ ಗೌಡ ಬೆಳ್ತಂಗಡಿ ಭಾಗವಹಿಸಿ ಸಂಘದ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮಲವಂತಿಗೆ-ಮಿತ್ತಬಾಗಿಲು ಗ್ರಾಮದ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷರು ಹಾಗೂ ಸೋಮಂತ್ತಡ್ಕ ಶಾಖೆ ಯ ಸಲಹಾ ಸಮಿತಿಯ ನಿರ್ದೇಶಕರಾದ ಆನಂದ ಗೌಡ ಮೈರ್ನೋಡಿ, ಸಲಹಾ ಸಮಿತಿಯ ನಿರ್ದೇಶಕರಾದ ಜಯವರ್ಮ ಗೌಡ ಕಳ್ಬೇಟ್ಟು, ಬಂಗಾಡಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶೀನಪ್ಪ ಗೌಡ ನೇತ್ರಕೊಡಂಗೆ, ರವಿಚಂದ್ರ ಗೌಡ ಗುಂಡೀರು ಹಾಗೂ ಸ್ವ- ಸಹಾಯ ಸಂಘದ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.

ಈಗಾಗಲೇ ರಚನೆಯಾದ 6 ಸಂಘಗಳ ಸದಸ್ಯರುಗಳಿಗೆ ಸ್ವ ಸಹಾಯ ಸಂಘದ ನಿಯಮಾವಳಿ ಮತ್ತು ನಿಬಂಧನೆಗಳ ಬಗ್ಗೆ ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ವಿವರಿಸಿ ಮಾಹಿತಿ ನೀಡಿದರು. ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಾಖಾಪ್ರಬಂಧಕರಾದ ಉಮೇಶ್. ಎಂ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

Suddi Udaya

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ WAVES-24 ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya

ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ 28ನೇ ವರ್ಷದ ಸಂಭ್ರಮ “ಮಕ್ಕಳ ಹಬ್ಬ

Suddi Udaya

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಫೆ. 18 -22 : ಭ | 1008 ಶ್ರೀಪಾರ್ಶ್ವನಾಥ ಸ್ವಾಮಿಯ ಜಿನ ಮಂದಿರದ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ಬಿಂಬ ಪ್ರತಿಷ್ಠಾ ಮಹೋತ್ಸವ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

Suddi Udaya
error: Content is protected !!