ಶಿಶಿಲ: ಕಳೆದು ಹೋದಂತಹ ಸುಮಾರು ರೂ. 9500 ನಗದು ಇದ್ದ ಪರ್ಸ್ ನ್ನು ಶಿಶಿಲದ ಕೊರಗಪ್ಪ ಗೌಡ ರವರು ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಸ್ ಸ್ಟ್ಯಾಂಡ್ ಬಳಿ ಕುಳಿತಿದ್ದ ಶಿಶಿಲದ ನಿವಾಸಿ ಕಮಲ ಅವರು ಪರ್ಸ್ ಮರೆತು ಹೋಗಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪಕ್ಕದಲ್ಲೇ ಇರುವ ಕೊರಗಪ್ಪ ಗೌಡರ ಅಂಗಡಿಗೆ ತಲುಪಿಸಿದ್ದು, 3ದಿನದಿಂದ ಪರ್ಸ್ ನಲ್ಲಿ ಇದ್ದ ನಂಬರ್ ಒಂದಕ್ಕೆ ಕರೆ ಮಾಡಿ ವಿಷಯ ತಿಳಿಸಲು ಯತ್ನಿಸಿದ್ದರು. ಕರೆ ಸ್ವೀಕರಿಸದ ಹಿನ್ನೆಲೆ ಆ ನಂಬರ್ ಗೆ ಶಿಶಿಲ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ರವರು ನಿರಂತರ ಕರೆ ಮಾಡಿದಾಗ ಕರೆ ಸ್ವೀಕರಿಸಿ ಮಾತನಾಡಿದ್ದು ಬಳಿಕ ಪರ್ಸ್ ಕಳೆದುಕೊಂಡಿದ್ದ ಕಮಲ ಅಂಗಡಿಗೆ ಆಗಮಿಸಿ ರೂ.9500 ನಗದು ಇದ್ದ ಪರ್ಸ್ ಪಡೆದುಕೊಂಡಿದ್ದಾರೆ.











