38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಶ್ರೀ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ವೇದವರ್ಧನ ಸ್ವಾಮೀಜಿಯವರು ಭೇಟಿ, ನಾಗರಿಕರಿಂದ ಗೌರವಾರ್ಪಣೆ

ಅರಸಿನಮಕ್ಕಿ: ಪರ್ಯಾಯ ಸಂಚಾರದಲ್ಲಿರುವ ಶೀರೂರು ಮಠದ ಶ್ರೀ ವೇದವರ್ಧನ ಸ್ವಾಮೀಜಿ ಜ. 2ರಂದು ಬೂಡುಮುಗೇರು ದೇವಸ್ಥಾನಕ್ಕೆ ಆಗಮಿಸಿದಾಗ ಶೀರೂರು ಪರ್ಯಾಯ ಪೂಜ್ಯ ಶ್ರೀಗಳ ಸ್ವಾಗತ ಸಮಿತಿ ಹತ್ಯಡ್ಕ ಮತ್ತು ಭಕ್ತಾದಿಗಳಿಂದ ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತ ಮಾಡಲಾಯಿತು.

ಪಟ್ಟದ ದೇವರ ಪೂಜೆ ನಡೆದ ಬಳಿಕ ಮಠದ ದಿವಾನರಾದ ಉದಯ ಕುಮಾರ್ ಭಕ್ತರಿಗೆ ಕೃಷ್ಣನ ಸಂದೇಶ ಹಾಗೂ ಪರ್ಯಾಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇದವರ್ಧನ ಸ್ವಾಮೀಜಿರವರು ಭಕ್ತವೃಂದಕ್ಕೆ ಆಶೀರ್ವಚನ ನೀಡಿದರು. ಆ ಬಳಿಕ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಮೀಜಿಯವರಿಗೆ ಗೌರವಾರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ ರಾಜಗೋಪಾಲ್ ಪೆರಡೇಲು, ಶೀರೂರು ಪರ್ಯಾಯ ಪೂಜ್ಯ ಶ್ರೀಗಳ ಸ್ವಾಗತ ಸಮಿತಿ ಹತ್ಯಡ್ಕ ಇದರ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಕಾರ್ಯಕ್ರಮದ ಸಂಚಾಲಕ ಜಯರಾಮ ನೆಲ್ಲಿತ್ತಾಯ, ವಿವಿಧ ದೇವಸ್ಥಾನಗಳ ಅಧ್ಯಕ್ಷರುಗಳು, ಹತ್ಯಡ್ಕ -ಶಿಶಿಲ, ಶಿಬಾಜೆ, ರೆಖ್ಯ ಗ್ರಾಮಗಳ ಭಕ್ತಾದಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ

Suddi Udaya

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya

ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ರವರಿಗೆ ಪ್ರಮಾಣಪತ್ರ ವಿತರಣೆ

Suddi Udaya

ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ಸಂದೇಶವಿರುವ ಪೋಸ್ಟ್‌ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

Suddi Udaya

ನ್ಯಾಯಾಲಯದ ಆದೇಶ ಉಲ್ಲಂಘನೆ ; ಯೂಟ್ಯೂಬರ್ ಸಮೀರ್ ಎಂ.ಡಿ. ಗೆ ಬಿಗ್ ಶಾಕ್..!! ಹಾಜರಾತಿಗೆ ನೋಟೀಸ್ ಜಾರಿ, ತಕ್ಷಣ ವಿಡಿಯೋ ಡಿಲೀಟ್ ಮಾಡಲು ಆದೇಶ; ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

Suddi Udaya

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya
error: Content is protected !!