ಬೆಳ್ತಂಗಡಿ: ತಾಲೂಕಿನ ಕಣಿಯೂರು, ಬಂದಾರು, ಮೊಗ್ರು ಹಾಗೂ ಕೊಯ್ಯೂರು ಗ್ರಾಮಗಳ ಬಂಧುಗಳು ಬಂದಾರು ಗ್ರಾಮದ ಸಿದ್ಧಾರ್ಥ ಕಾಲೋನಿ ಪುನರಡ್ಕದಲ್ಲಿ ೨೦೮ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ ಪ್ರಯಕ್ತ ಸ್ವಾಭಿಮಾನಿ ದಿಗ್ವಿಜಯ ಹಾಗೂ ಬಿವಿಎಫ್ ಪದಗ್ರಹಣ ಕಾರ್ಯಕ್ರಮ ಜ.1ರಂದು ನಡೆಯಿತು.
ಬಹುಜನ ವಾಲೆಂಟಿಯರ್ ಫೋರ್ಸ್ ಬೆಳ್ತಂಗಡಿ ನೇತೃತ್ವ ವಹಿಸಿ ನಡೆದ ಈ ಕಾರ್ಯಕ್ರಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಪ್ರಪಂಚಕ್ಕೆ ಪರಿಚಯಿಸಿದ 1818 ಜನವರಿ 1 ಕೋರೆಗಾಂವ್ ಕದನದ ಇತಿಹಾಸವನ್ನು ತಿಳಿ ಹೇಳುವ ಮೂಲಕ ಆಚರಿಸಲಾಯಿತು.
ಮುಖ್ಯ ಅತಿಥಿ ಪಿ.ಎಸ್. ವೆಂಕಪ್ಪ ಮಾತನಾಡಿ ಕೋರೆಗಾಂವ್ ಕದನದ ಸ್ವಾಭಿಮಾನ ದಿಗ್ವಿಜಯದ ಪರಿಣಾಮ ಈ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣಕ್ಕೆ ನಾಂದಿಯಾಯಿತು. ಆ ಮೂಲಕ ಶಿಕ್ಷಣದ ಅವಕಾಶ ಪಡೆದಂತಹ ಅಂಬೇಡ್ಕರ್ ರವರು ಈ ದೇಶದ ಸಂವಿಧಾನ ರಚಿಸಿ ಸರ್ವರಿಗೂ ಸಮತೆ, ಸೋದರತೆ, ಸ್ವತಂತ್ರ ಜೀವನ ಕಾನೂನುಬದ್ಧಗೊಳಿಸಿದರು ಎಂದರು.
ಕಾರ್ಯಕ್ರಮದಲ್ಲಿ ಬಹುಜನ ಚಳುವಳಿಯ ಪ್ರಮುಖರಾದ ಎಂ ಬಾಬು ಬೆಳಾಲು, ಸಂಜೀವ ನೀರಾಡಿ, ಅಣ್ಣು ಸಾಧನ ಹಾಗೂ ಕರಿಯಪ್ಪ ಬೆಳಾಲು, ಸಿದ್ಧಾರ್ಥ ಕಾಲೋನಿಯ ಹಿರಿಯರಾದ ಗೋಪಾಲ ಭಾಗವಹಿಸಿದ್ದರು.
ಬಿವಿಎಫ್‌ನ ಬಂದಾರು, ಕೊಯ್ಯೂರು, ಕಣಿಯೂರು ಗ್ರಾಮದ ಜವಾಬ್ದಾರಿಗಳನ್ನು ಹಂಚಿಕೊಂಡ ನೂತನ ಪದಾಧಿಕಾರಿಗಳನ್ನು ಪರಿಚಯಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಎಸ್. ಶ್ರೀನಿವಾಸ್, ಕೃಷ್ಣಪ್ಪ ಪಿ., ಪೂವಪ್ಪ ಬೆಳಾಲು, ಪ್ರವೀಣ್, ಲೋಹಿತ್, ಅನಂತ್ ಪಿ, ರಮೇಶ್ ಉಮಿಯ, ನವೀನ್, ಗಣೇಶ್ ಕೆ, ಪ್ರಶಾಂತ್, ಕೆ. ವೀರಪ್ಪ, ಕೃಷ್ಣ, ರಘು, ಸುರೇಶ್ ನೀರಾಡಿ, ಬಿ ಕೆ ಸಂಜೀವ, ಸತೀಶ್, ಸುರೇಂದ್ರ, ಪ್ರಕಾಶ್, ವಸಂತ್, ಸಿದ್ದಾರ್ಥ ಮತ್ತು ಮಹಿಳಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಬಿವಿಎಫ್‌ನ ಲೋಕೇಶ್ ನೀರಾಡಿ ಸಂವಿಧಾನದ ಪೀಠಿಕೆ ಬೋಧಿಸಿ, ರಮೇಶ್ ಬಿ.ಎಲ್. ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಪಿ. ಸ್ವಾಗತಿಸಿದರು, ಪ್ರವೀಣ್ ಪುನರಡ್ಕ ಧನ್ಯವಾದವಿತ್ತರು.











