ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.13: ಗೃಹಲಕ್ಷ್ಮೀ ನೋಂದಣಿ ವಿಶೇಷ ಶಿಬಿರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ಕಛೇರಿಯ 1ನೇ ಮಹಡಿಯಲ್ಲಿ ಜ.13 ರಂದು ಗೃಹಲಕ್ಷ್ಮೀ ನೋಂದಣಿ ವಿಶೇಷ ಶಿಬಿರವನ್ನು ಪೂರ್ವಾಹ್ನ:10.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯವರೆಗೆ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಐಟಿ ಮತ್ತು ಜಿ.ಎಸ್.ಟಿ ಹೊರತುಪಡಿಸಿ, ಅರ್ಜಿ ಸಲ್ಲಿಸಿ 5 ತಿಂಗಳು ಕಳೆದು (Processing ಎಂದು) ಗೃಹಲಕ್ಷ್ಮೀ ಯೋಜನೆಯ ಹಣವು ವೈಯುಕ್ತಿಕ ಖಾತೆಗೆ ಜಮೆಯಾಗದ ಫಲಾನುಭವಿಗಳು ಭಾಗವಹಿಸಬಹುದು. ಫಲಾನುಭವಿಗಳು ಅರ್ಜಿ ಸಲ್ಲಿಸಿದ ದಾಖಲೆ ಪ್ರತಿ, ಪಡಿತರ ಚೀಟಿ ತರುವುದು. ಅಲ್ಲದೇ, ಈವರೆಗೆ ಅರ್ಜಿ ಸಲ್ಲಿಸದಿರುವ ತಾಲೂಕಿನ ಅರ್ಹ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಪಡಿತರ ಚೀಟಿ ತಿದ್ದುಪಡಿ ಮಾಡಿಕೊಂಡ ಅರ್ಹ ಗೃಹಿಣಿಯರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ಆಧಾರ್ ಪ್ರತಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ತರುವಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭವಾನಿಶಂಕರ್ ಎನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಸೆ.22-ಅ.1: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Suddi Udaya

ಬೆಳ್ತಂಗಡಿ ಎಸ್‌.ಐ.ಟಿ ಕಚೇರಿಗೆ ಹಾಜರಾದ ಜಯಂತ್.ಟಿ

Suddi Udaya

ನಡ ಡ್ಯಾಮ್ ನಲ್ಲಿ ಪ್ರವಾಹಕ್ಕೆ ಬಂದು ಸಿಲುಕಿಕೊಂಡಂತಹ ಕಸ ಹಾಗೂ ಮರ ದ ದಿಮ್ಮಿಗಳ ತೆರವು

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಲಯನ್ ಎಂ. ಜಿ. ಶೆಟ್ಟಿಯವರಿಗೆ ನುಡಿನಮನ

Suddi Udaya

ಬಜಿರೆ-ಹೊಸಪಟ್ಣದಲ್ಲಿ ಹೊನಲು ಬೆಳಕಿನ ಪುರುಷರ 60ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya
error: Content is protected !!