23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ: ನೆಕ್ಕರಡ್ಕ ಶ್ರೀ ವಿಠೋಬಾ ರಕುಮಾಯಿ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜರಿಂದ 5 ಲಕ್ಷ ರೂ. ಮಂಜೂರು


ಅರಸಿನಮಕ್ಕಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಳವಾಗಿರುವ ವಿಠ್ಠಲ ದೇವಸ್ಥಾನಗಳ ಪೈಕಿ ಒಂದಾಗಿರುವ ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಶ್ರೀ ವಿಠೋಬಾ ರಕುಮಾಯಿ ದೇವಸ್ಥಾನವು ನವೀಕರಣಗೊಳ್ಳುತ್ತಿದ್ದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ಶಾಸಕರ ಅನುದಾನದಲ್ಲಿ 5 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.

ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂತ ಗೋಖಲೆ, ಕಾರ್ಯದರ್ಶಿ ಜಿತೇಂದ್ರ ಗೋಖಲೆ, ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಕೆ. ಹೊಸ್ತೋಟ, ದೇವಳದ ಪ್ರಮುಖರಾದ ಪ್ರಭಾಕರ ಹೆಬ್ಬಾರ್ ಕೊಡಂಗೆ, ದಿನೇಶ್ ಮೆಹೆಂದಳೆ, ಅನಿಲ್ ಕುಮಾರ್, ಕಾರ್ತಿಕ್ ಹೆಬ್ಬಾರ್ ಗೋಖಲೆ, ನವೀನ್ ಶೆಂಡ್ಯೆ,ಬಿಜೆಪಿ ಪ್ರಮುಖರಾದ ವೃಷಾಂಕ್ ಖಾಡಿಲ್ಕರ್, ಶ್ರೀಕಾಂತ್ ಕೆ. ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಶಾಸಕರನ್ನು ದೇವಳದ ಸಮಿತಿ ವತಿಯಿಂದ ಗೌರವಿಸಲಾಯಿತು.

Related posts

ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕರಾಗಿ ರಂಜಿತ್ ಎಚ್ ಡಿ ಬಳಂಜ ಆಯ್ಕೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ದ.ಕ. ಜಿಲ್ಲೆಯ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಪ್ರಧಾನ ಕಾರ್ಯದರ್ಶಿಯಾಗಿ ಬಿ ಅಬ್ದುಲ್ ರಝಾಕ್ ನೇಮಕ

Suddi Udaya

ನಾವೂರು ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉಜಿರೆಯಲ್ಲಿ ಸಾಕು ನಾಯಿ, ಬೆಕ್ಕುಗಳಿಗೆ ರೇಬಿಸ್ ಲಸಿಕೆ ಶಿಬಿರ

Suddi Udaya
error: Content is protected !!