23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

ಅರಸಿನಮಕ್ಕಿ : ಸಹೃದಯಿಗಳಾದ ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಹಾಗೂ ದಾನಿಗಳಿಂದ ನವೀಕೃತಗೊಂಡಿರುವ ಸರಕಾರಿ ಪ್ರೌಢಶಾಲೆ ಅರಸಿನಮಕ್ಕಿಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಜ. 4ರಂದು ಜರುಗಿತು.

ಕಾರ್ಯಕ್ರಮವನ್ನು ಮಂಗಳೂರಿನ ಉದ್ಯಮಿ ಚಂದ್ರಹಾಸ ಶೆಟ್ಟಿ ಫಲಸ್ತಡ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಾಮನ್ ತಾಮನ್ಕರ್ ವಹಿಸಿದ್ದರು. ವೇದಿಕೆಯಲ್ಲಿ ಕೃಷಿಕರಾದ ಕಾಶಿನಾಥ್ ದಾಮ್ಲೆ, ಕಂಟ್ರಾಕ್ಟರ್ ಶ್ರೀನಿಧಿ, ನಿವೃತ್ತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಾಲ್ಟರ್ ಡಿ’ಮೆಲ್ಲೊ, ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಐತಾಳ್, ಗ್ರಾ. ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಅರಸಿನಮಕ್ಕಿ ಕಾಲೇಜಿನ ಪ್ರಾಂಶುಪಾಲ ರಾಮಯ್ಯ ಶೆಟ್ಟಿ ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಶಿವಾನಂದ ಮಯ್ಯ ಮೈಪಾಲ, ಸುಬ್ರಹ್ಮಣ್ಯ ಭಟ್ ಪಡ್ಡಾಯಿಬೆಟ್ಟು, ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ್ ಕುಲಾಲ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮಂಜುಳಾ, ಶಿಕ್ಷಕಿಯರಾದ ಮೀನಾಕ್ಷಿ, ಶ್ರೀಚೇತನಾ, ಅತಿಥಿ ಶಿಕ್ಷಕರು, ಅಡುಗೆಯವರು, ದಾನಿಗಳನ್ನು, ನಿವೃತ್ತ ಯೋಧರನ್ನು, ವಿವಿಧ ಬ್ಯಾಚ್ ನವರನ್ನು ಅಭಿನಂದಿಸಲಾಯಿತು. 2013-14ರ ಬ್ಯಾಚ್ ನ ಪ್ರಶಾಂತ್ ಮತ್ತು ತಂಡದವರು ಶಾಲೆಗೆ ಫ್ಯಾನ್ ಹಾಗೂ ಪ್ರಿಂಟರ್ ನೀಡಿದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಚೇತನಾ ಕುಮಾರಿ ಎಸ್. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಚೇತನಾ ಕಾರ್ಯಕ್ರಮ ನಿರೂಪಿಸಿ, ನಿಡ್ಲೆ ಪ್ರೌಢಶಾಲಾ ಶಿಕ್ಷಕ ಶರತ್ ಧನ್ಯವಾದವಿತ್ತರು.

Related posts

ಪಡಂಗಡಿ ಗ್ರಾ.ಪಂ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ರೇಷ್ಮೆರೋಡು, ಕೊಂಡೆಮಾರು ರಸ್ತೆಯ ಬದಿ ಸ್ವಚ್ಛತಾ ಕಾರ್ಯ

Suddi Udaya

ಕನ್ಯಾಡಿ ಸೇವಾನಿಕೇತನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಆರ್ಥಿಕ ನೆರವು

Suddi Udaya

ಮೊಗ್ರು: ಸರಕಾರಿ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಅಳದಂಗಡಿ: ಮೂಡಯಿತ್ತಿಲು ಎಸ್.ಸಿ ಕಾಲೋನಿಯಲ್ಲಿ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya
error: Content is protected !!