ತಣ್ಣೀರುಪಂತ: ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಗೆ ವ್ಯಾಪ್ತಿಯ ತಣ್ಣೀರುಪಂತ ಗ್ರಾಮದ ಪಾಲೇದು, ಬೋಲ್ಡೇಲು, ನಿರ್ಲಾಜೆ, ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಎರಡು ಕಾಡಕೋಣಗಳು ಓಡಾಟ ನಡೆಸುತ್ತಿದೆ.
ತೋಟಗಳಲ್ಲಿ ಅವುಗಳ ಹೆಜ್ಜೆಗುರುತು ಕಂಡಿದ್ದು, ರಸ್ತೆ ಬದಿಯ ಕಾಡಿನಲ್ಲಿರುವ ಕಾಡಕೋಣವನ್ನು ಸ್ಥಳೀಯರೊಬ್ಬರು ಮೊಬೈಲ್ ಕ್ಯಾಮಾರದಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿದೆ.











