25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಬದಿನಡೆ ನಾಗಬ್ರಹ್ಮ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

ಬಳಂಜ: ಬೆಳ್ತಂಗಡಿ ತಾಲೂಕಿನ ಹೆಸರಾಂತ ಕ್ಷೇತ್ರಗಳಲ್ಲಿ ಒಂದಾದ ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜ 3 ರಂದು ವಿಜೃಂಭಣೆಯಿಂದ ನಡೆಯಿತು.

ಫಲ್ಗುಣಿ ನದಿ ತಟದಲ್ಲಿರುವ ಈ ದೇವಸ್ಥಾನದಲ್ಲಿ ಆಶ್ಲೇಷ ಬಲಿ,ದೇವರ ಬಲಿ ಉತ್ಸವ,ದುರ್ಗಾ ನಮಸ್ಕಾರ ಪೂಜೆ, ಅಯ್ಯಪ್ಪ ದೇವರ ವಿಶೇಷ ಪೂಜೆ, ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಹಾಗೂ ಪಂಚಶ್ರೀ ಮಕ್ಕಳ ಕುಣಿತ ಭಜನಾ ಮಂಡಳಿ ನಾಲ್ಕೂರು ಮತ್ತು ಪಂಚಶ್ರೀ ಮಹಿಳಾ ಭಜನಾ ಮಂಡಳಿ ನಾಲ್ಕೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸ್ವಾತಿ ಮ್ಯೂಸಿಕಲ್ ಕಾರ್ಯಾಣ ಇವರ ಭಕ್ತಿ ಗಾನ ವೈಭವ ಮನ ಸೆಳೆಯಿತು. ವ್ಯಾಘ್ರ ಚಾಮುಂಡಿ ದೈವದ ನರ್ತನ ಸೇವೆ,ದೈವ ದೇವರ ಭೇಟಿ ನಡೆಯಿತು. ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಮತ್ತು ಮಂಜುಳಾ ದಂಪತಿಗಳು ಸ್ವಾಗತಿಸಿ, ಪ್ರಸಾದ ನೀಡಿದರು.

Related posts

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಮಾಹಿತಿ ಕಾರ್ಯಕ್ರಮ

Suddi Udaya

ಶಿಶಿಲ: ಸುಕನ್ಯಾ ಹೃದಯಾಘಾತದಿಂದ ನಿಧನ

Suddi Udaya

ಕಡಿರುದ್ಯಾವರದಲ್ಲಿ ಅಡಿಕೆ ತೋಟಕ್ಕೆ ಕಾಡಾನೆ ದಾಳಿ : ಸೋಲಾರ್ ಬೇಲಿಗಳಿಗೆ ಹಾನಿ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

Suddi Udaya

ಕರ್ನೋಡಿ ಸ.ಉ.ಹಿ.ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ದೊರಕಿಸಿ ಕೊಡುವಂತೆ ಶಾಸಕರಿಗೆ ಮನವಿ

Suddi Udaya
error: Content is protected !!