30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ 14: ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ನೂತನ ಘಂಟಾ ಗೋಪುರದ ಉದ್ಘಾಟನೆ: ಸಮಾಲೋಚನೆ ಸಭೆ

ಅಳದಂಗಡಿ: ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಸನ್ನಿಧಿಗೆ ದೋರಿಂಜೆ ಶ್ರೀಮತಿ ಅಮಣಿ ಮಂಜು ದೇವಾಡಿಗರ ಮಕ್ಕಳು ನೂತನವಾಗಿ ನಿರ್ಮಿಸಿದ ಘಂಟಾ ಗೋಪುರ ಇದರ ಉದ್ಘಾಟನಾ ಸಮಾರಂಭವು ಜ.14ರಂದು ಜರುಗಲಿದ್ದು ಇದರ ಸಮಾಲೋಚನಾ ಸಭೆಯು ಜ.5ರಂದು ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಸನ್ನಿಧಿಯಲ್ಲಿ ಆಡಳಿತದಾರ ಶಿವಪ್ರಸಾದ್ ಅಜಿಲರ ಮುಂದಾಳತ್ವದಲ್ಲಿ ನಡೆಯಿತು.

ಘಂಟಾ ಗೋಪುರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ರವರು ನೆರವೇರಿಸಲಿದ್ದಾರೆ ಎಂದವರು ತಿಳಿಸಿದರು.

ಸಮಾಲೋಚನಾ ಸಭೆಯಲ್ಲಿ ಪ್ರಮುಖರಾದ ಸದಾನಂದ ಪೂಜಾರಿ ಉಂಗಿಲಬೈಲು,ಪಿಎಚ್ ನಿತ್ಯಾನಂದ ಶೆಟ್ಟಿ,ಹರೀಶ್ ಆಚಾರ್ಯ, ಭರತೇಶ್ ಜರ್ಮನಿ, ಸುಭಾಶ್ಚಂದ್ರ ರೈ ಪಡ್ಯೋಡಿ,ಮೋಹನದಾಸ್ ಎ, ಧರ್ಣಪ್ಪ ಪೂಜಾರಿ ದೊರಿಂಜ, ಅಭಿಷೇಕ್ ನೀರಲ್ಕೆ,ಪ್ರಸಾದ್ ಅಬ್ಬನಬಾಕ್ಯಾರು, ಜಿನ್ನಪ್ಪ ನೀರಲ್ಕೆ, ರಘು ದೇವಾಡಿಗ, ವಿಜಯ ಕುಮಾರ್ ಜೈನ್, ಸುಪ್ರೀತ್ ಜೈನ್, ಶಶಿಕಾಂತ್ ನಾಯಕ್, ಪೂರ್ಣಿಮಾ ಪ್ರಮೋದ್, ಆಟೋ ಚಾಲಕ ಸಂಘದ ಅಧ್ಯಕ್ಷ ಕೊರಗಪ್ಪ, ಕಿರಣ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

Related posts

ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯರ್ ಗ್ರೇಡ್ ಪರೀಕ್ಷೆ: ಮಡಂತ್ಯಾರು ನಿಯತಿ ನೃತ್ಯ ನಿಕೇತನ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಪುದುವೆಟ್ಟು ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ವರ್ಷಾವಧಿ ಜಾತ್ರೆ ಹಾಗೂ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭೆ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರುಮೌಲ್ಯಮಾಪನ: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯ ಅಮೋಘ ಸಾಧನೆ- ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿದ ಪ್ರಾರ್ಥನಾ

Suddi Udaya

ಶಿಬಾಜೆ ಗ್ರಾ.ಪಂ. ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ದಿನಕರ್ ಆಯ್ಕೆ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya
error: Content is protected !!