25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಈಶ್ವರ ದೇವರ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

ಮಚ್ಚಿನ: ಶ್ರೀ ಕ್ಷೇತ್ರ ಬಳ್ಳಮಂಜದ ಶಿಲಾಮಯ ಈಶ್ವರ ದೇವರ ಗರ್ಭಗ್ರಹ ಹಾಗೂ ತೀರ್ಥ ಮಂಟಪದ ನಿರ್ಮಾಣದ ನಿಧಿ ಕುಂಭ ಸ್ಥಾಪನೆ ಪೂರ್ವಕ ಷಡಾಧಾರ ಪ್ರತಿಷ್ಠೆ ಹಾಗೂ ಅಷ್ಟೇಷ್ಟಕ ಸ್ಥಾಪನೆ ಪೂರ್ವಕ ಗರ್ಭನ್ಯಾಸವು ಜ.04 ರಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಅನುವಂಶಿಯ ಆಡಳಿತ ಮೊಕ್ತೇಸರರಾದ ಡಾ. ಎಂ ಹರ್ಷ ಸಂಪಿಗೆತ್ತಾಯ ಧಾರ್ಮಿಕ ವಿಧಿಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಂಗಳೂರು ಶ್ರೀ ಕ್ಷೇತ್ರ ಶರವು ಮೊಕ್ತೇಸರರು ಶ್ರೀ ಶರವು ರಾಘವೇಂದ್ರ ಶಾಸ್ತ್ರಿ, ಶಾಸಕ ಹರೀಶ್ ಪೂಂಜ , ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗ್ಲೋಬಲ್ ಹೆಡ್ ಇನ್ಫೋಸಿಸ್ ಐ ಟಿ ಉಪಾಧ್ಯಕ್ಷ ರಾಧಾಕೃಷ್ಣ ಎಸ್, ಪುರಂದರ ರೈ ಮಿತ್ರಂಪಾಡಿ ಕೃಷಿಕರು ಪುತ್ತೂರು, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ , ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ , ಯೋಗೀಶ್ ಪೂಜಾರಿ ಕಡ್ತಿಲ ಉಪಸ್ಥಿತರಿದ್ದರು.

ದೇವಾಲಯದ ಸಿಂಬದಿ ವರ್ಗ ಊರಿನ ಗಣ್ಯರು ಕ್ಷೇತ್ರದ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.
✍️ಹರ್ಷ ಬಳ್ಳಮಂಜ

Related posts

ಮಂಜೊಟ್ಟಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಕ್ಕಡ ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಬೃಹತ್ ಪ್ರತಿಭಟನೆ

Suddi Udaya

ರಂಜಿತ್ ಎಚ್ ಡಿ ಬಳಂಜರವರಿಗೆ ಜೆಸಿಯ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ

Suddi Udaya

ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ

Suddi Udaya

ಉಜಿರೆ ಬೆನಕ ಆಸ್ಪತ್ರೆಗೆ ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ಭೇಟಿ

Suddi Udaya

ಬಂದಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!