ಬೆಳ್ತಂಗಡಿ : ವ್ಯವಹಾರ ಸಂಬಂಧ ಎಂಬುವುದಾಗಿ 9 ಲಕ್ಷ ರೂಪಾಯಿ ಹಣ ಪಡೆದು ಅದಕ್ಕೆ ಚೆಕ್ ನೀಡಿ ವಾಪಸ್ ನೀಡದ ಕಾರಣ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ನಿವಾಸಿ ಚಂದ್ರಶೇಖರ್ ಎಮ್ ಎಂಬವರು ಬೆಳ್ತಂಗಡಿ ಸಿ.ಜೆ(ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 11-12-2023 ರಂದು ಆರೋಪಿ ರೇಷ್ಮೆ ರೋಡ್ ನಿವಾಸಿ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ವಾದ-ಪ್ರತಿವಾದದ ಬಳಿಕ ಆರೋಪಿ ಬೆಳ್ತಂಗಡಿ ತಾಲೂಕಿನ ರೇಷ್ಮೆ ರೋಡ್ ನಿವಾಸಿ ಸಂತೋಷ್ ಎಂಬವರನ್ನು ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ಜ.3 ರಂದು ತೀರ್ಪು ನೀಡಲಾಗಿದೆ.
ಆರೋಪಿ ಪರ ವಕೀಲರಾದ ಶ್ರೀಮತಿ ಉಷಾ.ಎನ್.ಜಿ ಮತ್ತು ವೈ.ರಾಧಾಕೃಷ್ಣ ಇವರು ವಾದ ಮಂಡಿಸಿದ್ದರು.











