September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಜ.14-23: ಸಾವಿರ ವರ್ಷಗಳ ಇತಿಹಾಸವಿರುವ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜಾತ್ರೋತ್ಸವ-ಮಹಾರಥೋತ್ಸವ

ಉಜಿರೆ: ಸಾವಿರಾರು ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿರುವ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶೀಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರವರ ನೇತೃತ್ವದಲ್ಲಿ ಶ್ರದ್ದಾ ಭಕ್ತಿಯ ಜಾತ್ರೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.14-22 ರವರೆಗೆ ವಿಜೃಂಭಣೆಯಿದ ನಡೆಯಲಿದೆ. ಈಗಾಗಲೇ ಜಾತ್ರೋತ್ಸವ ಹಾಗೂ ಮಹಾರಥೋತ್ಸವದ ಅಂಗವಾಗಿ ಹಲವಾರು ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.

ಜಾತ್ರೋತ್ಸವ ಕಾರ್ಯಕ್ರಮಗಳು:
ಜ.14-ರಾತ್ರಿ ಧ್ವಜಾರೋಹಣ ಭಂಡಾರ ಏರುವುದು, ಜ.15 ರಾತ್ರಿ-ಬದಿ ಮೇಲೆ ಉಳ್ಳಾಲ್ತಿ, ಪೊಸಲಾಯಿ ಕುಮಾರ ಸ್ವಾಮಿ ದೈವಗಳಿಗೆ ನೇಮ, ಜ.16 ಸಾಯಂ-ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ, ರಾತ್ರಿ ಭಂಡಾರ ಇಳಿಯುವುದು, ದೇವಸ್ಥಾನದಲ್ಲಿ ಉತ್ಸವ, ಶ್ರೀ ಕೃಷ್ಣ ಮಂಟಪ, ಜ.17 ರಾತ್ರಿ ಉತ್ಸವ, ಅಶ್ವತ್ಥಕಟ್ಟೆ, ಜ.18 ರಾತ್ರಿ ಉತ್ಸವ, ಪುಷ್ಕರಣಿ ಕಟ್ಟೆ, ಜ.19 ರಾತ್ರಿ ಉತ್ಸವ-ಪೇಟೆ ಸವಾರಿ, ಜ.20 ರಾತ್ರಿ ಉತ್ಸವ-ಚಂದ್ರಮAಡಲ ರಥೋತ್ಸವ, ಜ.21-ಬೆಳಿಗ್ಗೆ ಉತ್ಸವ, ದರ್ಶನ ಬಲಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾರಥೋತ್ಸವ, ಶ್ರೀ ಭೂತಬಲಿ, ಶಯನ, ಜ.22 ಬೆಳಿಗ್ಗೆ ಕವಾಟೋದ್ಘಾಟನೆ, ಸಾಯಂ. ಅವಭೃತೋತ್ಸವ ರಾತ್ರಿ ಧ್ವಜಾವರೋಹಣ, ಜ.೨೩ ಬೆಳಿಗ್ಗೆ ಕಲಶಾಭಿಷೇಕ, ಸಂಪ್ರೋಕ್ಷಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಜ.19: ಸಂಜೆ ಗಂಟೆ ೭.೦೦ ರಿಂದ ಶ್ರೀ ಸರ್ವೇಶ ದೇವಸ್ಥಳಿ ಉಜಿರೆ ಮತ್ತು ಬಳಗದವರಿಂದ “ನಾದಾರ್ಪಣಂ”. ಜ.20: ಸಂಜೆ ಶಾಸ್ತಿçÃಯ ನೃತ್ಯ ಕಾರ್ಯಕ್ರಮ “ನೃತ್ಯ ಸಿಂಚನ”, ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪೃಥ್ವಿ ಸತೀಶ್ ಶ್ರೀದೇವಿ ಕಲಾನಿಕೇತನ. ಜ.21 ಸಂಜೆ ನೃತ್ಯ ವಿದುಷಿ ಪ್ರಿಯಾ ಸತೀಶ್ ಇವರ ಶಿಷ್ಯ ವೃಂದದವರಿಂದ “ನೃತ್ಯೋಲ್ಲಾಸ”, ರಾತ್ರಿ ಗಂಟೆ ೮.೦೦ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ, ಯಕ್ಷಭಾರತಿ ಕನ್ಯಾಡಿ ಸಂಯೋಜನೆಯಲ್ಲಿ “ಇಂದ್ರಜಿತು ಕಾಳಗ” ಯಕ್ಷಗಾನ ಪ್ರದರ್ಶನ. ಜ.22-ಸಂಜೆ ೭.೩೦ ರಿಂದ ಸಂಗಮ ಕಲಾವಿದರು ಉಜಿರೆ ಇವರಿಂದ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಕಾಸ್‌ದ ಕಸರತ್ತ್” ಪ್ರದರ್ಶನಗೊಳ್ಳಲಿದೆ.

ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ:
ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ನಡೆಯಲಿದೆ. ಊರ ಪರವೂರ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೇವರ ಅನುಗ್ರಹ ಪಡೆಯುತ್ತಾರೆ. ಇದೇ ಬರುವ ಮಾರ್ಚ್ 3 ರಿಂದ 11 ರವರೆಗೆ ಉಜಿರೆ ಜನಾರ್ಧನ ದೇವಸ್ಥಾನಕ್ಕೆ ಬ್ರಹ್ಮಕಲಶೋತ್ಸವದ ಸಂಭ್ರಮ, ವಿಜಯಗೋಪುರ ಲೋಕಾರ್ಪಣೆ, ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆಯಾಗಲಿದೆ. ಈಗಾಗಲೇ ಎಲ್ಲಾ ತಯಾರಿಗಳು ಭರದಿಂದ ಸಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಭಕ್ತರೂ ಸೇರುವ ನಿರೀಕ್ಷೆಯಿದೆ ಎಂದು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರವರು ತಿಳಿಸಿದರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಬಿ. ಕೌಡಂಗೆ

Suddi Udaya

ಗುರುವಾಯನಕೆರೆಯಲ್ಲಿ ನಿಲ್ಲಿಸಿದ ರೂ.68 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಕಳವು

Suddi Udaya

ಜಮೀಯತುಲ್ ಫಲಾಹ್ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಗಾರ

Suddi Udaya

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

Suddi Udaya

ರಾಜ್ಯದಲ್ಲಿ ವಚನಭ್ರಷ್ಟ ಕಾಂಗ್ರೆಸ್ ಸರಕಾರ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!