ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆಯ ವಿಶೇಷ ಚೇತನ ಮಕ್ಕಳ “ಕ್ರೀಡೆ ಮತ್ತು ಅರಿವು ಕಾರ್ಯಕ್ರಮ 2025-26 ” ಶಾಲಾ ಸಿದ್ಧತಾ ಕೇಂದ್ರ ಪಡ್ಡಂದಡ್ಕದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷ ಸುಂದರ್ ಹೆಗ್ಡೆ ರವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವ್ಯಕ್ತಿತ್ವ ವಿಕಸನ ಹಾಗೂ ಮನೋದೈಹಿಕ ಸಾಮರ್ಥ್ಯಗಳ ವೃದ್ಧಿ ಕೌಶಲಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ಬಹುಮುಖ ಪ್ರತಿಭಾವಂತ, ಹಲವು ಕ್ಷೇತ್ರಗಳ ಸಾಧಕ ಸುಂದರ್ ಹೆಗ್ಡೆ ರವರು ನಿರಂತರವಾಗಿ ವಿಶೇಷ ಚೇತನ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಕಗಳನ್ನು ನೀಡುತ್ತಿದ್ದು.ಅವರನ್ನು ಇಲಾಖಾ ವತಿಯಿಂದ ಗೌರವಿಸಲಾಯಿತು .











