22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಾಲೇದು ಪರಿಸರದಲ್ಲಿ ಚಿರತೆ ಓಡಾಟ: ಅರಣ್ಯ ಇಲಾಖೆಯಿಂದ ಗಸ್ತು

ತಣ್ಣೀರುಪಂತ: ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ತಣ್ಣೀರುಪಂತ ಗ್ರಾಮದ ಪಾಲೇದು ಪರಿಸರದಲ್ಲಿ ಚಿರತೆ ಓಡಾಟ ನಡೆಸಿದ ಘಟನೆ ಜ.8 ರಂದು ನಡೆದಿದೆ.

ಪಾಲೇದು ಪರಿಸರದ ಮಡಪ್ಪಾಡಿ ಗೇಟು, ಕಜೆ, ಕಂಡಂಬರಪಲ್ಕೆ, ಎರುಕಲ್ಲು ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದ್ದನ್ನು ಸಾರ್ವಜನಿಕರು ಕಂಡಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ತಂಡ ರಾತ್ರಿ 9:45 ಗಂಟೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ನಡೆಸಿದೆ ಅಲ್ಲದೇ ಎರಡು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಲು ತಿರ್ಮಾನಿಸಿದ್ದಾರೆ. ಚಿರತೆ ಸಂಜೆ ವೇಳೆಗೆ ಕೂಗು ಶಬ್ದವನ್ನು ಕೆಲ ಮಂದಿ ಕೇಳಿದ್ದು ಕಳೆದ ಹಲವು ದಿನಗಳಿಂದ ಚಿರತೆ ಈ ಪ್ರದೇಶದಲ್ಲಿ ಸುತ್ತಾಡುತ್ತಿದೆ ಅಲ್ಲದೇ ಒಂದೇ ನಿರ್ದಿಷ್ಟ ಸ್ಥಳದಲ್ಲಿ ಚಿರತೆ ಇರಾದ ಕಾರಣ ಬೋನ್ ಇರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಹೈರಾಣಿಸಿದೆ. ಈ ಸಂದರ್ಭದಲ್ಲಿ ಅರಣ್ಯ ಪಾಲಕ ನಾಗಲಿಂಗಪ್ಪ ಡಿ., ವಾಹನ ಚಾಲಕ ಕಿಶೋರ್ ಕುಮಾರ್ ಹಾಗೂ ಸ್ಥಳೀಯರಾದ ವಿಜಯ್ ಪುಪಾಡಿಕಲ್ಲು, ಪುರಂದರ ಕಜೆ, ಪತ್ರಕರ್ತ ಮನೀಶ್ ವಿ.ಅಂಚನ್ ಪಾಲೇದು ಮತ್ತಿತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಪ್ರಾಕೃತಿಕ ವಿಕೋಪದಿಂದ ಮನೆ ಬಿರುಕುಗೊಂಡ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

Suddi Udaya

ಒಲಿಂಪಿಯಾಡ್ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ನಾವೂರು ಗ್ರಾಮ ಪಂಚಾಯತ್ ನಲ್ಲಿ ರೈತರಿಗೆ ಒಂದು ದಿನದ ಕೃಷಿ ತರಬೇತಿ ಕಾರ್ಯಕ್ರಮ

Suddi Udaya

ಮುಂಡಾಜೆ ಸೀಟು ಬಳಿ ಧರೆಗುರುಳಲು ಸಿದ್ಧಗೊಂಡ ಮರಗಳು

Suddi Udaya

ಮೆಣಸಿನ ವ್ಯಾಪಾರಿಯ ಬೈಕ್ ಕಳವು

Suddi Udaya

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!