September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲೋತ್ಸವ, ಕಾರ್ಯಲಯ ಉದ್ಘಾಟನೆ

ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಸಂಕಲ್ಪದಂತೆ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ನಾಗತನುತರ್ಪಣ ಹಾಗೂ ನಾಗಬ್ರಹ್ಮಮಂಡಲ ಸೇವೆಯು ಜ.10, 11 ರಂದು ನಡೆಯಲಿದೆ.

ಈ ವೇಳೆ ನಾಗಬ್ರಹ್ಮಮಂಡಲೋತ್ಸವ ಕಾರ್ಯಲಯವನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಅನಂತ ಇರ್ವತ್ರಾಯ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಕಾರ್ಯದರ್ಶಿ ಮಧುರ ರಾಘವ ಅತ್ತೋಡಿ, ಕೋಶಾಧಿಕಾರಿ ಹರ್ಷ ಆರ್ ಪಕ್ಕಿದಕಲ, ಮೇಲಂತಬೆಟ್ಟು ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಚಂದ್ರರಾಜ್, ಹರ್ಷ ಹೆಚ್.ಆರ್, ಧಾರ್ಮಿಕ ಪರಿಷತ್ ಸದಸ್ಯ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ, ಸಮಿತಿಯ ಸದಸದಯರಾದ ಜಯಂತಿ ಪಕ್ಕಿದಕಲ, ಗಿರೀಶ್ ಕುಮಾರ್, ಸೋಮಪ್ಪ ಪೂಜಾರಿ, ಬೋಜ ಪೂಜಾರಿ, ಅವಿನಾಶ್ , ರಾಧಾಕೃಷ್ಣ ರೈ ಅಟ್ಲಾಜೆ, ನಾಗೇಶ್ ಮುಡಲ, ಪ್ರದೀಪ್ ಶೆಟ್ಟಿ ವಾತ್ಸಲ್ಯ, ಪುರಂದರ ಶೆಟ್ಟಿ ಪಾಡ್ಯಾರು, ರಮಾನಾಥ ರೈ ಬಳಂಜ, ಯೋಗೀಶ್ ಕುಮಾರ್ ನೂಜೇಲು, ದಯಾನಂದ ಸವಣಾಲು, ಗುರು ಭಟ್, ನೀತ್ ಕುಮಾರ್, ರೂಪ ಮೊದಲಾದವರು, ಭಕ್ತರು ಉಪಸ್ಥಿತರಿದ್ದರು.

ಇಂದು (ಜ.10) ಬೆಳಗ್ಗೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ. ಸ್ವಸ್ತಿ ಪುಣ್ಯಾಹ ವಾಚನ, ಸಪ್ತಶುದ್ಧಿ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮ ಕಲಶಪೂರಣೆ, ಕಲಶಾಭಿಷೇಕ, ಗಣಪತಿ ಅಥರ್ವಶೀರ್ಷ ಪಾರಾಯಣ, ಸ್ಥಳದ ದೈವಗಳಿಗೆ ಕಲಶಾಭಿಷೇಕ, ಪಂಚಪರ್ವ, ಮಧ್ಯಾಹ್ನ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ ನಡೆಯಿತು.

Related posts

ಎಸ್‌ಎಸ್‌ಎಲ್‌ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಮಾಳಿಗೆ ಶ್ರೀ ಕದಿರಾಜೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶತ ರುದ್ರಾಭಿಷೇಕ ಹಾಗೂ ರಂಗಪೂಜೆ

Suddi Udaya

ಕಾಯರ್ಪಾಡಿಯಿಂದ ಕನ್ಯಾರಕೋಡಿವರೆಗೆ ಹದಗೆಟ್ಟ ರಸ್ತೆ : ದುರಸ್ತಿಗೊಳಿಸುವಂತೆ ಇಳಂತಿಲ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಬ್ದುಲ್ ಲತೀಷ್ ರಿಂದ ಗ್ರಾ.ಪಂ. ಗೆ ಮನವಿ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ

Suddi Udaya

ಬಜಿರೆ: ಹೊಸಪಟ್ಣ ಪರಿಸರದಲ್ಲಿ ಚಿರತೆ ಓಡಾಟ-ಜನರಲ್ಲಿ ಆತಂಕ: ಬೋನ್ ಅಳವಡಿಸಲು ಗ್ರಾಮಸ್ಥರ ಆಗ್ರಹ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಪಕ್ಕಳ ಭೇಟಿ

Suddi Udaya
error: Content is protected !!