37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕವರದಿ

ಮಡಂತ್ಯಾರು: ಪ್ರಶಿಕ್ಷಣ ವರ್ಗ – ಹಿಂದೂ ಸಂಗಮ ಕಾರ್ಯಕ್ರಮ ಆಮಂತ್ರಣ ಪತ್ರ ಬಿಡುಗಡೆ

ಮಡಂತ್ಯಾರು: ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ ಮತ್ತು ಸಂಘಟಿತ ಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಿಂದೂ ಸಂಗಮ ಮಡಂತ್ಯಾರು ನಿರ್ವಹಣಾ ತಂಡದ ವತಿಯಿಂದ ಮಡಂತ್ಯಾರು ಮಂಡಲ ನಿರ್ವಹಣಾ ತಂಡದ ಪದಾಧಿಕಾರಿಗಳಿಗಾಗಿ ಪ್ರಶಿಕ್ಷಣ ವರ್ಗ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ.9ರಂದು ಶ್ರೀ ಮಹಿಷ ಮರ್ಧಿಣಿ ದೇವಸ್ಥಾನ, ಪಾರೆಂಕಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮದ ಆಶಯ, ಪದಾಧಿಕಾರಿಗಳ ಜವಾಬ್ದಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಾರ್ಯ ಶ್ರೀ ಮಹಿಷ ಮರ್ಧಿಣಿ ದೇವಸ್ಥಾನದ ಅರ್ಚಕರಾದ ಶ್ರೀಧರ್ ರಾವ್ ಪೇಜಾವರ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಪ್ರಶಿಕ್ಷಣ ವರ್ಗವನ್ನು ತಾಲೂಕು ಸಂಯೋಜಕರಾದ ಅನಿಲ್ ಕುಮಾರ್ ಯು ಹಾಗೂ ತಾಲೂಕು ಕಾರ್ಯದರ್ಶಿ ವಸಂತ ಮರಕಡ , ಸಹ ಕೋಶಾಧಿಕಾರಿ ಪ್ರಭಾಕರ ಉಪ್ಪಡ್ಕ, ಮತ್ತು ರಾಜಾರಾಮ್ ಪುರಿಯ ಅವರು ನಡೆಸಿಕೊಟ್ಟರು.ಸಭೆಯಲ್ಲಿ ತಾಲೂಕು ಆಯೋಜನಾ ಸಮಿತಿಯ ಉಪಾಧ್ಯಕ್ಷರಾದ ಜಯಂತ್ ಶೆಟ್ಟಿ ಜೊತೆ ಕಾರ್ಯದರ್ಶಿ ವೀರೇಂದ್ರ ಕುಮಾರ್, ಮಡಂತ್ಯಾರು ಮಂಡಲ ನಿರ್ವಹಣಾ ತಂಡದ ಸಂಯೋಜಕರಾದ ಶ್ರೀಕಾಂತ್ ಶೆಟ್ಟಿ, ಊರಿನ ಗಣ್ಯರು ಹಾಗೂ ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಚ್ಚಿನ, ಪಾರೆಂಕಿ, ಮಾಲಾಡಿ, ಸೊಂಣಂದೂರು ಮತ್ತು ಕುಕ್ಕಳ ಗ್ರಾಮಗಳಿಂದ ಸುಮಾರು 92 ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಶಿಬಾಜೆ ಸುರಕ್ಷಿತಾರಣ್ಯದ ಪಡಂತಾಜೆ ರಸ್ತೆ ಬದಿ 6 ತಿಂಗಳ ಪ್ರಾಯದ ಚಿರತೆ ಮರಿಯ ಶವ ಪತ್ತೆ

Suddi Udaya

ಬೆಳ್ತಂಗಡಿ: ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಡ್ರೋನ್‌ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಹಿಮಾನ್ಸ್ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya

ನಾವರ ,ಕುದ್ಯಾಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya
error: Content is protected !!