September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುವದಿನಾಚರಣೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುವದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಉಜಿರೆ ಮತ್ತು ಆಸ್ಪತ್ರೆ ಶಾಂತಿವನ ಇದರ ಉಪನ್ಯಾಸಕರು ಮತ್ತು ವೈದ್ಯಾಧಿಕಾರಿಗಳು ಆಗಿರುವ ಡಾ. ಪಕೃತಿ ಕೆದಿಲಾ ಇವರು ಆಗಮಿಸಿದ್ದರು. ಇವರು ವಿವಿಧ ಚಟುವಟಿಕೆಗಳ ಮುಖಾಂತರ ವಿಧ್ಯಾರ್ಥಿಗಳಿಗೆ ಶಿಸ್ತು, ಸಮಯಪಾಲನೆ, ಯೋಜನೆ ,ಯೋಗ ಜ್ಞಾನ ಇತ್ಯಾದಿಗಳ ಕುರಿತು ಮಾಹಿತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಇವರು ಯುವಜನತೆಯಲ್ಲಿ ಇರಬೇಕಾದ ವಿಶೇಷ ಗುಣಗಳು, ಗುರಿ ತಲುಪುವ ಮಾರ್ಗಗಳು ಇತ್ಯಾದಿಗಳನ್ನು ವಿಧ್ಯಾರ್ಥಿಗಳಿಗೆ ವಿವರಿಸಿದರು. ಶಾಲಾ ವಿದ್ಯಾರ್ಥಿ ಸಾರ್ಥಕ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರವಣ್ ಸ್ವಾಗತಿಸಿ, ಕುಮಾರಿ ಯಜ್ಞ ಅತಿಥಿಗಳ ಕಿರು ಪರಿಚಯ ಮಾಡಿಕೊಟ್ಟರು. ಶಾಲಾ ವಿದ್ಯಾರ್ಥಿ ಶಿಕಿನ್ ಧನ್ಯವಾದವಿತ್ತರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related posts

ವೇಣೂರು: ದಿ| ರಾಜೇಂದ್ರ ರಾವ್ ಎಚ್ ರವರಿಗೆ ನುಡಿನಮನ

Suddi Udaya

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya

ಮದ್ದಡ್ಕ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಮತ್ತು ಅಕ್ಟೀವಾ ಡಿಕ್ಕಿ: ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಹಾಸನದ ಆಟೋಚಾಲಕನ ಕೊಲೆ ಮಾಡಿ ಶಿರಾಡಿ ಘಾಟ್ ನಲ್ಲಿ ಶವ ಬಿಸಾಕಿದ ಹಂತಕರು: ಧರ್ಮಸ್ಥಳ ನೇತ್ರಾವತಿ‌ ನದಿಯಲ್ಲಿ ಬಟ್ಟೆಗಳನ್ನು ಎಸೆದು ಪರಾರಿ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

Suddi Udaya

ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!