23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎಕ್ಸೆಲ್ ನಲ್ಲಿ 10 ಪ್ಲಸ್ ವಿಶೇಷ ಕಾರ್ಯಾಗಾರ

ಗುರುವಾಯನಕೆರೆ: ಯಾವುದೇ ಸಾಧನೆ ಮಾಡಬೇಕಿದ್ದರೂ ಏಕಾಗ್ರತೆ, ಪರಿಶ್ರಮ ಹಾಗೂ ಛಲ ಬೇಕೇಬೇಕು. ಅಲ್ಪ ತೃಪ್ತರಿಗೆ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ನಿಖರವಾಗಿದ್ದರೆ , ಸಾಧಿಸುವುದು ದೊಡ್ಡ ಸವಾಲಾಗದು ಎಂದು ಖ್ಯಾತ ಮನೋ ವಿಶ್ಲೇಷಕ, ಚಲನಚಿತ್ರ ನಿರ್ದೇಶಕರಾದ ಸ್ಮಿತೇಶ್ ಬಾರ್ಯ ಹೇಳಿದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಹತ್ತನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಎದುರಿಸುವ ಹಾಗೂ ಭವಿಷ್ಯದ ಕುರಿತಾದ ಕಾರ್ಯಗಾರ 10 ಪ್ಲಸ್ ನಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅವರು ಮಾತನಾಡುತ್ತಾ, ಹತ್ತನೆಯ ತರಗತಿಯ ಅಂಕಗಳು ಬದುಕಿನ ಎಲ್ಲಾ ಹಂತಗಳಲ್ಲೂ ಮುಖ್ಯವೆನಿಸುವ ಈ ಕಾಲಘಟ್ಟದಲ್ಲಿ , ವಿದ್ಯಾರ್ಥಿಗಳು ಪರಿಶ್ರಮ ಪಟ್ಟು, ಅಂಕಗಳನ್ನು ಪಡೆದು ಕೊಳ್ಳಬೇಕು ಎಂದರು.

ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಆಡಳಿತಾಧಿಕಾರಿ ಶಾಂತಿರಾಜ್ ಜೈನ್ ದೀಪ ಪ್ರಜ್ವಲನ ಮಾಡಿ, ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ , ಶಿಕ್ಷಣವನ್ನು ಸೇವೆ ಎನ್ನುವ ಪರಿಕಲ್ಪನೆಯನ್ನು ನೀಡುತ್ತಾ ಬಂದವರು ನಾವು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ದೊರಕಬೇಕು. ಅವರು ಅವಕಾಶ ವಂಚಿತರಾಗಬಾರದು ಎನ್ನುವುದು ನಮ್ಮ ಕಾಳಜಿ. ಒಳ್ಳೆಯ ಅಂಕಗಳನ್ನು ಪಡೆದು ಕೊಂಡು; ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಎಕ್ಸೆಲ್ ಬೆಳಕು ಯೋಜನೆಯಡಿ ಉಚಿತ ಶಿಕ್ಷಣ ನೀಡುವ ಅವಕಾಶವೂ ಇದೆ. ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯನಾರಾಯಣ ಭಟ್, ಎನ್ ಡಿ ಎ ಸಂಯೋಜಕ ಜೋಸ್ಟಮ್ ಎ ಟಿ,
ಜೆಇಇ ಸಂಯೋಜಕ ಪ್ರವೀಣ್ ಪಾಟೀಲ್, ಸಿ ಇ ಟಿ ಸಂಯೋಜಕ ಶ್ರೀನಿಧಿ ಶೆಟ್ಟಿ, ನಾಟ ಸಂಯೋಜಕ ವರುಣ್ ದೇವ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಕಜೆ ಸ್ವಾಗತಿಸಿದರು. ಉಪನ್ಯಾಸಕ ಪ್ರಜ್ವಿತ್ ರೈ ನಿರೂಪಿಸಿದರು. ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ವಂದಿಸಿದರು.

Related posts

ಆ.15-16: ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ 2025, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿವೇತನ ವಿತರಣೆ

Suddi Udaya

ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ

Suddi Udaya

ಬಂದಾರು: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದ ಸದಸ್ಯೆ ಚೆನ್ನಮ್ಮ ಖಂಡಿಗ ರಿಗೆ ಗೌರವಾರ್ಪಣೆ

Suddi Udaya

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

Suddi Udaya

ಕುವೆಟ್ಟು: ಸ.ಉ. ಪ್ರಾ. ಶಾಲಾ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ

Suddi Udaya

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

Suddi Udaya
error: Content is protected !!