ಅಳದಂಗಡಿ: ನಾವೂರು ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಬ್ರಹತ್ ಬ್ರಹತ್ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣವು ಜ 29 ರಂದು ನಡೆಯಲಿದ್ದು ಆ ಪ್ರಯುಕ್ತ ಅಳದಂಗಡಿ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆಯು ಜ 11ರಂದು ನಡೆಯಿತು.

ಸಭೆಯಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಸಮಿತಿ ಅಧ್ಯಕ್ಷ ಡಾ.ಪ್ರದೀಪ್ ಎ ಅವರು ಸಹಸ್ರಾರು ಭಕ್ತಾದಿಗಳಿಂದ ಏಕ ಕಂಠದಲ್ಲಿ ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ.ಸಾತ್ವಿಕ ಚಿಂತನೆ ಉದ್ದೀಪನಗೊಳಿಸುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಜೊತೆಯಾಗಬೇಕೆಂದರು. ನಾವೂರಿನ ದೇವಸ್ಥಾನದಲ್ಲಿ ನಡೆಯುವ ಸತ್ ಚಿಂತನೆಯ ಕಾರ್ಯಯೋಜನೆಗಳು ಅಲ್ಲಿಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜಕ್ಕೆ ತಲುಪಬೇಕು ಎಂದರು.

ವೇದಿಕೆಯಲ್ಲಿ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಶಶಿಧರ್ ಡೋಂಗ್ರೆ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಯೋಜನಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.

ಸಭೆಯಲ್ಲಿ ಡಾ.ತುಳಪುಳೆ, ನಿತ್ಯಾನಂದ ನಾವರ, ನಿರಂಜನ್ ಜೋಶಿ, ಸತೀಶ್ ಪೂಜಾರಿ ನಮನ, ಮೋಹನ್ ದಾಸ್, ವಿಜಯ್ ನಾವರ, ಮಾಲಾ ಎಂ.ಕೆ, ಮಂಜುನಾಥ ಆಚಾರ್ಯ ಸೇರಿದಂತೆ ಯೋಜನೆಯ ಪದಾಧಿಕಾರಿಗಳು,ಊರವರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.











