March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಮಸ್ಜಿದ್ ಮೇಲಂತಸ್ತಿನ ಕಾಮಗಾರಿಗೆ ಚಾಲನೆ

ಬೆಳ್ತಂಗಡಿ: ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಇದರ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಬಳಿಕ‌ನಡೆದ ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಬಶೀರ್ ವಹಿಸಿದ್ದರು.
ಸಮಾರಂಭದಲ್ಲಿ ದಾನಿಗಳು,‌ ನಿಡಿಗಲ್ ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷ ಮುಜೀಬ್ ಸಾಹೇಬ್, ಯುವ ಉದ್ಯಮಿ ಹಾಜಿ ಶಮೀಮ್ ಯೂಸುಫ್ ಮದ್ದಡ್ಕ, ಬಿ.ಎನ್ ಹಮೀದ್ ನಿಡಿಗಲ್, ಹನೀಫ್ ಮುಸ್ಲಿಯಾರ್ ಮೊದಲಾದವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಖತೀಬ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್, ಹಾಜಬ್ಬ, ಕೆರೀಂ ಕೆ.ಎಸ್, ಉಸ್ಮಾನ್ ಎಂ.ಕೆ, ಅಬ್ಬಾಸ್ ಸಿ, ಹಮೀದ್ ನೆಕ್ಕರೆ, ಶಬೀರ್ ಬಿಕೆಹೆಚ್, ಅಯೂಬ್ ಆಲಿಕುಂಞಿ, ಅಬ್ಬುಲ್ಲ ಹಾಜಿ, ಮುಹಮ್ಮದ್ ಜೈ ಭಾರತ್, ಬಶೀರ್ ಮಾಹಿನ್, ಮುಸ್ತಫಾ ಸಿ, ಸಿದ್ದೀಕ್ ನೆಕ್ಕರೆ, ಅಬೂಬಕ್ಕರ್ ಹಾಜಿ, ಅಶ್ರಫ್ ಇಸ್ಮಾಯಿಲ್ ಕುರುಡ್ಯ, ಕೆರೀಂ ಕುರುಡ್ಯ, ಉಸ್ಮಾನ್ ಉಂಞಿಚ್ಚ ಆಲಾಜೆ, ಬಾವಾಕ, ರಮ್ಲ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.

ಉಮ್ರಾ ಯಾತ್ರೆ ಕೈಗೊಳ್ಳುವ ಇಬ್ರಾಹಿಂ ಕನ್ಯಾಡಿ ಅವರನ್ನು ಈ ವೇಳೆ ಜಮಾಅತ್ ವತಿಯಿಂದ ಬೀಳ್ಕೊಡಲಾಯಿತು.
ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು.
ಸದರ್ ತ್ವಾಹಿರ್ ಸ‌ಅದಿ ಧನ್ಯವಾದವಿತ್ತರು.

Related posts

ಉಜಿರೆ ಗ್ರಾ.ಪಂ.ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ ರವರು ಭೇಟಿ ಗ್ರಾಮ ಪಂಚಾಯತ್ ಕಾರ್ಯ ವೈಖರಿಗೆ ಮೆಚ್ಚುಗೆ

Suddi Udaya

ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಪ್ರಕರಣ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ, ಪರಿಶೀಲನೆ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಕುಕ್ಕೆ ಕುಮಾರಧಾರ ಸ್ಥಾನಗಟ್ಟ ನದಿಯಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಾಬಂಧನ

Suddi Udaya

ಗಾಂಜಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮದಡ್ಕ ರಫೀಕ್ ರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!