ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಅಭೂತಪೂರ್ವ ಸಾಧನೆ

ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್ (National Science Olympiad – NSO) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಕಾಲೇಜಿಗೆ ಹಿರಿಮೆ ತಂದಿದ್ದಾರೆ.

ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ, ಕಾಲೇಜಿನ ಒಟ್ಟು 17 ವಿದ್ಯಾರ್ಥಿಗಳು ದ್ವಿತೀಯ ಹಂತದ (Level–2) ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಜೊತೆಗೆ, ಅತ್ಯುತ್ತಮ ಸಾಧನೆಯಾಗಿ 316 ವಿದ್ಯಾರ್ಥಿಗಳು ‘ಗೋಲ್ಡ್ ಮೆಡಲ್ ಆಫ್ ಎಕ್ಸಲೆನ್ಸ್’ ಪದಕ ಹಾಗೂ ಪ್ರಶಸ್ತಿಯನ್ನು ಪಡೆದು ಶೈಕ್ಷಣಿಕ ಶ್ರೇಷ್ಠತೆಯನ್ನು ಮೆರೆದಿದ್ದಾರೆ.

ವಿದ್ಯಾರ್ಥಿಗಳಾದ ಸಿ ಎ ವೇದಾಂತ್, ಶ್ರೀವತ್ಸ್ ಆರ್ ಜೋಶಿ, ನಮನಾ ಆರ್ ಶಂಕರ್, ಸಾಥ್ವಿಕ್ ರೈ ಎಂ, ಆಧ್ಯಾ ಎನ್, ತನ್ವಿ ಜೆ ಶೆಟ್ಟಿ, ನಿತಿನ್ ಜಿ ಡಿ, ರೋಹನ್ ಎಂ, ಧನುಷ್ ಎಂ, ಕೆ ಕೆ ಸರ್ವಿಕಾ, ನಿಶ್ಚಯ ಇ ಎನ್, ಪ್ರೀತಮ್ ಪಿ ಶೆಟ್ಟಿ, ರಾಹುಲ್ ಬಿ., ಜೀವಿತಾ, ಶ್ರದ್ಧಾ.

ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳ ತಾರ್ಕಿಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ ಶ್ರಮ, ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಹಾಗೂ ಕಾಲೇಜಿನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಪ್ರತಿಫಲವಾಗಿದೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು , ಸಂಯೋಜಕರಾದ ಹರೀಶ್ ಗೌಡ ಅವರು ಹಾಗೂ ಉಪನ್ಯಾಸಕ ವೃಂದವು ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಅಭಿನಂದಿಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡಲು ಶುಭಾಶಯಗಳನ್ನು ಕೋರಿದ್ದಾರೆ. ಭವಿಷ್ಯದಲ್ಲಿಯೂ ಇಂತಹ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ಸು ಸಾಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

Related posts

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರ

Suddi Udaya

ಪಡಂಗಡಿ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಲಾರಿ

Suddi Udaya

ಜೂ. 14: ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ಪೂಜೆ – ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚುನಾವಣಾ ಪರಿವೀಕ್ಷಕರು

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಅಭಿನಂದನಾ ಕಾರ್ಯಕ್ರಮ: ಶಾಸಕ ಹರೀಶ್ ಪೂಂಜರಿಗೆ ಗೌರವಾರ್ಪಣೆ: ಬಿಜೆಪಿ ಗೆಲುವಿಗೆ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಬಿದ್ದ ಮರ

Suddi Udaya
error: Content is protected !!