32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಾರೆಂಕಿ ಮಾರಿಗುಡಿ ಶ್ರೀ ಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ದಶಮಾನೋತ್ತರ ಅಷ್ಟಮ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ದೊಂಪದ ಬಲಿ ನೇಮೋತ್ಸವ

ಮಚ್ಚಿನ: ಪಾರೆಂಕಿ ಗ್ರಾಮದ ಮಾರಿಗುಡಿ ಶ್ರೀ ಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ದಶಮಾನೋತ್ತರ ಅಷ್ಟಮ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ ನಡೆಯಿತು.

ಬೆಳಿಗ್ಗೆ ಬ್ರಹ್ಮಶ್ರೀ ಡಾ| ಶಿವಪ್ರಸಾದ್ ತಂತ್ರಿಗಳು ಹಾಗೂ ಶ್ರೀ ಕ್ಷೇತ್ರ ಪಾರೆಂಕಿ ದೇವಾಲಯದ ಪ್ರಧಾನ ಅರ್ಚಕ ಟಿ ವಿ ಶ್ರೀಧರ ರಾವ್ ಇವರ ಪುರೋಹಿತದೊಂದಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ , ರಾತ್ರಿ ಗದ್ದಿಗೆ ಪೂಜೆ, ಮಹಾಪೂಜೆ , ದರ್ಶನ ಸೇವೆ, ದೈವ ದೇವರ ಭೇಟಿ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾನ ಸಿರಿ ಕಲಾಕೇಂದ್ರ ಪುತ್ತೂರು ಇವರಿಂದ ಭಕ್ತಿ ಜಾನಪದ ಗೀತೆ ಸಂಗಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಶರರಾದ ಕೆ ಅರವಿಂದ ಪಡಿವಾಳ್, ಕೆ ರತ್ನರಾಜ ಪಡಿವಾಳ್ ಮೂಡಾಯೂರುಗುತ್ತು, ಗೌರವಾಧ್ಯಕ್ಷ ವಿಠಲ್ ಶೆಟ್ಟಿ ಮೂಡಾಯೂರು, ಅಧ್ಯಕ್ಷ ಬಾಲಚಂದ್ರ ಹೆಗ್ಡೆ, ಕೋಶಾಧಿಕಾರಿ ಡಾ. ಕೆ ಎಸ್ ಬಲ್ಲಾಳ್ , ಉಪಾಧ್ಯಕ್ಷರಾದ ಜಯಂತಿ ಹಾರಬೆ, ಕಿಶೋರ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಕಾಂತಪ್ಪ ಗೌಡ ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
✍️ವರದಿ ಹರ್ಷ ಬಳ್ಳಮಂಜ

Related posts

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಸೆ.1: ಬಿಜೆಪಿಯಿಂದ ಧರ್ಮಸ್ಥಳ ಚಲೋ-ಬೃಹತ್ ಸಮಾವೇಶ ಕೇಂದ್ರ, ರಾಜ್ಯ ಪ್ರಮುಖರು ಭಾಗಿ-ಲಕ್ಷಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಪತ್ರಿಕಾಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾಹಿತಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ: ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ನೂತನ ಕಚೇರಿ ಉದ್ಘಾಟನೆ : ಪತ್ರಕರ್ತರಿಗೆ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಾಧಕರಿಗೆ ಸನ್ಮಾನ – ಯಕ್ಷಗಾನ ಕಲಿಕಾ ತರಗತಿಗೆ ಚಾಲನೆ ಹಾಗೂ ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ‘ಕವಿಗೋಷ್ಠಿ

Suddi Udaya

ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ; ಶಾಸಕ ಹರೀಶ್ ಪೂಂಜರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ವಿಚಾರಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ

Suddi Udaya
error: Content is protected !!