ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14ರಿಂದ ಪ್ರಾರಂಭಗೊಂಡು ಜ.18ರ ವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಇಂದು (ಜ.14 ) ಬೆಳಿಗ್ಗೆ ತೋರಣ ಮುಹೂರ್ತ, ಹಾಗೂ ಗ್ರಾಮಸ್ಥರಿಂದ ಹಸಿರುವಾಣಿ ಹೊರೆಕಾಣಿಕೆ ನಡೆಯಿತು. ಈ ವೇಳೆ ದೇವಸ್ಥಾನದ 2026 ರ ನೂತನ ಕ್ಯಾಲೆಂಡರ್ ನ್ನು ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು , ಅರ್ಚಕ ಯು.ವಿ. ಗುರುಪ್ರಸಾದ್ ನಿಡ್ವಣ್ಣಾಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ್ ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್, ಊರಿನ ಗಣ್ಯರಾದ ದೇವಪಾಲ ಅಜ್ರಿ, ಜಾತ್ರಾ ಸಮಿತಿಯ ಅಧ್ಯಕ್ಷ ವಿಠಲ ಎಂ.ಕೆ, ಕಾರ್ಯದರ್ಶಿ ಶರತ್ ಚಂದ್ರ, ಚಂದ್ರಶೇಖರ್, ಹರೀಶ, ಸಮಿತಿ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಸಂಜೆ ಧ್ವಜಾರೋಹಣ ಸುತ್ತು ಬಲಿ, ಮಹಾಪೂಜೆ, ರಾತ್ರಿ ಪಟ್ರಮೆ ಅನಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮತ್ತು ಸುರ್ಯತ್ತಾವು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್, ಉಳಿಯಬೀಡು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ.

Related posts

ಬೆಳ್ತಂಗಡಿ ಬಿಜೆಪಿ ಕಛೇರಿಯಲ್ಲಿ ಸುಶಾಸನ‌ ದಿನ ಆಚರಣೆ

Suddi Udaya

ಉಜಿರೆ: ‘ಎಕೊ-ವಿಶನ್ 2023’ ಅಂತರ್ ವಿಭಾಗೀಯ ಹಾಗೂ ಅಂತರ್ ತರಗತಿ ಸ್ಪರ್ಧೆ ಉದ್ಘಾಟನೆ

Suddi Udaya

ಉಜಿರೆ ನ್ಯಾಚುರೋಪತಿ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

Suddi Udaya

ಕೊಕ್ಕಡ: ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಶಬರಾಯ ನಿಧನ

Suddi Udaya

ಸೆ.16: ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya

ಗಂಡಿಬಾಗಿಲಿನ ಸೈಂಟ್ ತೋಮಸ್ ಚರ್ಚಿನಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿಶೇಷ ಪೂಜೆ

Suddi Udaya
error: Content is protected !!