September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆ

ಕಳಿಯ: ದೇವಸ್ಥಾನಕ್ಕೆ ಇಂದು ಮುಂಜಾನೆ 4ಗಂಟೆಗೆ ಧನುಪೂಜೆಗೆ ಮನೆಯಿಂದ ಹೋಗಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ವಿವರ: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ನಾಪತ್ತೆಯಾದ ಬಾಲಕನಾಗಿದ್ದಾನೆ. ನಾಳ ದೇವಸ್ಥಾನಕ್ಕೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದು, ಇಂದು ಮುಂಜಾನೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸುಮಂತ್ ಮನೆಯಿಂದ ಹೊರಟ್ಟಿದ್ದರು ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್‌ನ ಮನೆಯವರು ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು. ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು‌, ಪೊಲೀಸ್ ಇಲಾಖೆ , ಅಗ್ನಿ ಶಾಮಕ ದಳ ಸ್ಥಳೀಯರು ಸೇರಿ ತೀರಾ ಹುಡುಕಾಟ ನಡೆಸಿದ್ದು ಇದೀಗ ಬಾಲಕನ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರರು ಪೃಥ್ವಿ ಸಾನಿಕಂ, ಆರ್ ಐ ಪಾವಡಪ್ಪ, ಆಡಳಿತಾಧಿಕಾರಿ, ಬಿಒ ತಾರಕೇಸರಿ, ಶಾಲಾ ಶಿಕ್ಷಕರು, ಆಗಮಿಸಿದ್ದರು.

Related posts

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ದಾ ಶೆಟ್ಟಿ ಎಣಿoಜೆ ರವರಿಗೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಹಾಗೂ ಭಕ್ತಿ ಹೆಜ್ಜೆ ಬಳಗದಿಂದ ಸನ್ಮಾನ

Suddi Udaya

ಮಡಂತ್ಯಾರು ಸುವೇಗ ಮೋಟಾರ್ಸ್ ನಲ್ಲಿ ಹೀರೊ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಿಡುಗಡೆ

Suddi Udaya

ಗುರುವಾಯನಕೆರೆ: ಮಗುವಿನೊಂದಿಗೆ ತಾಯಿ ನಾಪತ್ತೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ – 2025

Suddi Udaya

ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ಚಂದ್ರ ನಿಧನ

Suddi Udaya

ಇಂದಬೆಟ್ಟು: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ

Suddi Udaya
error: Content is protected !!