September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಪಠಣ: ದಶಮಾನೋತ್ಸವ ಸಂಪನ್ನ : ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಮಾಜದಲ್ಲಿ ಶಾಂತಿ ಸಾಮರಸ್ಯ ಬೆಳೆಯಲು ಪ್ರತಿಯೊಬ್ಬರಲ್ಲು ಸಂಸ್ಕಾರ ಬೆಳೆಯಬೇಕು.ಅಂತಹ ಸಂಸ್ಕಾರಗಳು ಧಾರ್ಮಿಕ ಕೇಂದ್ರಗಳಿಂದ ದೊರೆಯಬೇಕು. ನಾವೂರು ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ಕಳೆದ ಹತ್ತುವರ್ಷಗಳಿಂದ ಧನುರ್ಮಾಸ ಮತ್ತು ಇತರ ದಿನಗಳಲ್ಲಿ ಸಾವಿರಾರು ಮಂದಿಯಿಂದ ವಿಷ್ಣು ಸಹಸ್ರನಾಮ ಪಠಣ ಅಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಜ.೧೪ ಮಕರ ಸಂಕ್ರಮಣದ ದಿನದಂದು ನಾವೂರು ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೊಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು ಇದರ ವತಿಯಿಂದ ಧನುರ್ಮಾಸ ಪ್ರಯುಕ್ತ ಕಳೆದ ಮೂವತ್ತು ದಿನಗಳಿಂದ ನಡೆಯುತ್ತಿರುವ ದಶಮಾನೋತ್ಸವದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದ ಸಮಾರೋಪದಲ್ಲಿ ವಿಷ್ಟು ಸಹಸ್ರನಾಮ ಪಠಣಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ, ಮಾತನಾಡಿ ಈ ಗ್ರಾಮದ ಪ್ರತಿಯೊಬ್ಬರೂ ಇಂತಹ ಪುಣ್ಯಕಾರ್ಯದಲ್ಲಿ ಭಾಗವಹಿಸುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ. ನೂರಾರು ಮಕ್ಕಳು ಭಾಗವಹಿ ಬಾಲ್ಯದಲ್ಲೇ ಸಂಸ್ಕಾರವಂತರಾಗಿರುವುದು ಹೆಮ್ಮಯ ವಿಷಯವಾಗಿದೆ ಎಂದರು.


ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಮಾತನಾಡಿ ಒಂದು ಗ್ರಾಮದ ದೇವಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿದ್ದಾರೆ ಎಂದರೆ ಗ್ರಾಮ ಸುಭೀಕ್ಷೆಯಾಗಿದೆ ಎಂದರ್ಥ. ಇಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧರ್ಮ ಜಾಗೃತಿಯ ಕಾರ್ಯ ನಡೆಯುತ್ತಿದೆ ಇಂತಹ ಕಾರ್ಯಕ್ರಮ ಎಲ್ಲ ಕಡೆ ನಡೆಯಬೇಕು ಎಂದರು.


ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ:
ಇದೇ ಸಂದರ್ಭದಲ್ಲಿ ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜಾ ಬಿಡುಗಡೆಗೊಳಿಸಿದರು. ಈ ಸಂದರ್ಭ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ಪ್ರದೀಪ್ ನಾವೂರು, ಟ್ರಷ್ಟಿಗಳಾದ ಹರೀಶ್ ಕಾರಿಂಜ, ಉಮೇಶ್ ಪೂಜಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗದ ಮುಖ್ಯಸ್ಥ ಪೂರಣ್ ವರ್ಮ, ಉಜಿರೆ ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ಅಳದಂಗಡಿ ಶ್ರಿಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಡಾ ಶಶಿಧರ ಡೋಂಗ್ರೆ, ಡಾ. ಸುಷ್ಮಾಡೋಂಗ್ರೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಬಂಗಾಡಿ ಸಿ. ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಕುಮಾರ್, ಗಣಪತಿ ಭಟ್ ಕುಳಮರ್ವ, ಶ್ರಿಗುರುದೇವ ಬ್ಯಾಂಕ್ ನ ನಿರ್ದೇಶಕಿ ತನುಜಾ ಶೇಖರ್, ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅದ್ಯಕ್ಷ ವಿನಯಚಂದ್ರ ಸೇನೆರೆಬೆಟ್ಟು, ಪಿಡಿಒ ಮೋಹನ್ ಬಂಗೇರ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ವಿಜಯವಾಣಿ ಪತ್ರಿಕೆಯ ಪತ್ರಕರ್ತ ಮನೋಹರ್ ಬಳಂಜ, ಚೈತ್ರೆಶ್ ಇಳಂತಿಳ, ಸುದ್ದಿ ಚಾನೆಲ್‌ನ ಮುಖ್ಯಸ್ಥ ದಾಮೋದರ್ ದೊಂಡೋಲೆ, ರಾಜೀವ್ ಸಾಲಿಯಾನ್ ಮುಂಡೂರು, ಶಿಕ್ಷಕ ಜಗನ್ನಾಥ್, ರಾಜೇಂದ್ರ ಭಟ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ವೆಂಕಟರಮಣ ಮಯ್ಯ ಮತ್ತು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಮುಂಜಾನೆ ವಿಷ್ಟುಸಹಸ್ರನಾಮ ಪಠಣ ನಡೆಯಿತು.

Related posts

ಶಿಕ್ಷಕಿ ಮಾಲತಿ ಶಿಶಿಲ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಧರ್ಮಸ್ಥಳ: ಮುಳಿಕ್ಕಾರುನಲ್ಲಿ ಕಾಡಾನೆಗಳ ದಾಳಿ: ಅಪಾರ ಕೃಷಿ ಹಾನಿ

Suddi Udaya

ಶಾಸಕ ಹರೀಶ್ ಪೂಂಜರಿಗೆ ಅಂಗರಕ್ಷಕ ನಿಯೋಜನೆ

Suddi Udaya
error: Content is protected !!