25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಪ್ರತ್ಯಕ್ಷ: ಅಪಾಯದಿಂದ ಪಾರಾದ ಕಾರ್ಮಿಕರು

ಮುಂಡಾಜೆ: ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆಯವರ ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಪತ್ತೆಯಾಗಿದ್ದು, ಮುಂಡಾಜೆಯ ಜನರಲ್ಲಿ ಆತಂಕ ಮೂಡಿಸಿದೆ.

ರಬ್ಬರ್ ಟ್ಯಾಪಿಂಗ್ ನ ಕಾರ್ಮಿಕರು ಚಿರತೆಗಳನ್ನು ನೋಡಿ ಕಕ್ಕಾಬಿಕ್ಕಿಯಾಗಿ ಓಡಿದ್ದು, ಅವರು ಅನಂತ್ ಭಟ್ ರವರಿಗೆ ಮಾಹಿತಿ ನೀಡಿದ್ದಾರೆ. ಒಂದು ದೊಡ್ಡ ಚಿರತೆಯ ಜೊತೆ ಮೂರು ಮರಿ ಚಿರತೆಗಳು ಪತ್ತೆಯಾಗಿದ್ದು, ಮತ್ತಷ್ಟು ಚಿರತೆಗಳು ಇರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಸುಮಾರು 3-4 ದಿನಗಳಿಂದ ಚಿರತೆ ಮುಂಡಾಜೆ ಪರಿಸರದಲ್ಲಿ ಓಡಾಡುತ್ತಿದ್ದು, ಅರಸಮಜಲು, ಕುಂಟಾಲಪಲ್ಕೆ, ಕಲ್ಲಪಿತ್ತಿಲು ಎಂಬಲ್ಲಿ ಓಡಾಟ ನಡೆಸಿದ್ದು, ಜ.12ಂದು ಅರಸಮಜಲು ಚಿದಾನಂದ ನಾಯ್ಕ ರವರ ಮನೆಯ ಹಟ್ಟಿಯಲ್ಲಿದ್ದ ಕರುವನ್ನು ಚಿರತೆಯು ತಿಂದು ಹೋಗಿದ್ದು, ನಂತರ ಸ್ಥಳೀಯರ ನಾಯಿಯನ್ನು ತಿಂದ್ದು ಹಾಕಿದ ಬಗ್ಗೆ ವರದಿಯಾಗಿದೆ.

Related posts

ನಿವೃತ್ತ ಸೈನಿಕ ಅಶೋಕ್ ಪಿ.ಎಲ್ ರವರಿಗೆ ಕಣಿಯೂರು ವಲಯದ ಮೊಗ್ರು ಒಕ್ಕೂಟದ ವತಿಯಿಂದ ಸನ್ಮಾನ

Suddi Udaya

ಎ. 5-6 : ಮದ್ದಡ್ಕದಲ್ಲಿ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಎಂಪಿಎಲ್ ಸೀಸನ್ 6

Suddi Udaya

ನೆರಿಯ ಗ್ರಾಮ ಸಭೆ: ಜನವಸತಿಯಿರುವ ಪ್ರದೇಶಕ್ಕೆ ದಾರಿದೀಪ ವಿಸ್ತರಣೆಗೆ ಗ್ರಾಮಸ್ಥರ ಒತ್ತಾಯ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ: ತೋರಣ ಮುಹೂರ್ತ, ಧ್ವಜಾರೋಹಣ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯ ಪದಪ್ರದಾನ ಕಾರ್ಯಕ್ರಮ

Suddi Udaya

ಡಿಸ್ಕಸ್ ಥ್ರೋ: ಸುಷ್ಮಾ ಬಿ ಪೂಜಾರಿ ಯೈಕುರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya
error: Content is protected !!