25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಜಾತ್ರಾ ಮಹೋತ್ಸವ, ಆಮಂತ್ರಣ ದಶಮಾನೋತ್ಸವ ಸಂಭ್ರಮ: ಉದ್ಯಮಿ ಮೋಹನ್ ಕುಮಾರ್‌ರವರಿಂದ ಅಮ್ಯೂಸ್‌ಮೆಂಟ್ ಉದ್ಘಾಟನೆ

ಅಳದಂಗಡಿ: ಸತ್ಯ ಮತ್ತು ಧರ್ಮದ ಪುಣ್ಯಕ್ಷೇತ್ರ ಅಳದಂಗಡಿಯ ಜಾತ್ರಾಗರ ಮಹೋತ್ಸವ ಮತ್ತು ಆಮಂತ್ರಣ ದಶಮಾನೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ. ಸದಾ ನಮ್ಮ ಸಹಕಾರವಿದೆ ಎಂದು ಉಜಿರೆ ಲಕ್ಷ್ಮೀ ಇಂಡಸ್ಟಿçÃಸ್ ಕನಸಿನ ಮನೆ ಮಾಲಿಕ ಮೋಹನ್ ಕುಮಾರ್ ಹೇಳಿದರು.

ಅವರು ಜ 14 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ಜಾತ್ರಾ ಮಹೋತ್ಸವ, ಆಮಂತ್ರಣ ದಶಮಾನೋತ್ಸವ ಸಂಭ್ರಮದ ಅಮ್ಯೂಸ್ ಮೆಂಟ್ ಉದ್ಘಾಟಿಸಿ ಮಾತನಾಡಿದರು.


ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಮಕ್ಕಳನ್ನು ಜಾತ್ರೆ, ದೇವಸ್ಥಾನದ ಮತ್ತು ಧಾರ್ಮಿಕ ಕೆಲಸ ಕಾರ್ಯಗಳಿಗೆ ಕಳುಹಿಸುತ್ತಿದ್ದರು. ಇಂದು ಎಲ್ಲವೂ ಮಾಯವಾಗಿದೆ. ಮಕ್ಕಳಿಗೆ ನಮ್ಮ ನೆಲದ ಮೌಲ್ಯಗಳನ್ನು ತಿಳಿಸುವ ಕೆಲಸವಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ಡಾ.ಪ್ರೊಸ್ಟಿಲ್ ಅಜಿಲ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷ ದೇವದಾಸ್ ಶೆಟ್ಟಿ ಬದ್ಯಾರು, ಅಳದಂಗಡಿ ಸೊಸೈಟಿ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಹಿರಿಯರಾದ ಸದಾನಂದ ಪೂಜಾರಿ ಉಂಗಿಲಬೈಲು, ಶಿರ್ಲಾಲು ಸೊಸೈಟಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಉದ್ಯಮಿ ನಿತ್ಯಾನಂದ ನಾವರ, ಪ್ರಮುಖರಾದ ಶೇಖರ್ ನಾವರ, ಚಂದ್ರಶೇಖರ ಅಳದಂಗಡಿ, ಧರ್ಣಪ್ಪ ಪೂಜಾರಿ, ಪ್ರಜ್ವಲ್ ಜೈನ್, ಸುಪ್ರಿತ್ ಜೈನ್, ಆನಂದ ಪೂಜಾರಿ, ಪ್ರಭಾಕರ ಪೂಜಾರಿ, ಸುಂದರ ಶೆಟ್ಟಿ ಸುಲ್ಕೇರಿ ಹಾಗೂ ಇತರರು ಉಪಸ್ಥಿತರಿದ್ದರು.
ಆಮಂತ್ರಣ ಪರಿವಾರದ ಸಂಚಾಲಕ ವಿಜಯ್ ಜೈನ್ ನಾವರ ಸ್ವಾಗತಿಸಿ, ವಂದಿಸಿದರು.

Related posts

ಎಸ್ ಡಿ ಎಂ ಪ.ಪೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ

Suddi Udaya

ಮಾ.4: ನಮ್ಮ ಮನೆ ಹವ್ಯಕ ಭವನದಲ್ಲಿ ಆರಾಧನಾ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

Suddi Udaya

ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆ: ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್‌ನಲ್ಲಿ “ಚಿನ್ನದಂತ ನನ್ನ ಅಪ್ಪ” ವಿಶೇಷ ಅನುಬಂಧದ ಕಾರ್ಯಕ್ರಮ

Suddi Udaya
error: Content is protected !!