September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಮನೆಯಿಂದ ಜ‌.14 ರಂದು 5 ಗಂಟೆಗೆ ಹೊರಟು ಹೋದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆರೆಯ ನೀರನ್ನು ಖಾಲಿ ಮಾಡಿ ತನಿಖೆ ನಡೆಸಿದ ವೇಳೆ ನೀಲಿ ಬಣ್ಣದ ಟಾರ್ಚ್ ಲೈಟ್ ಪತ್ತೆಯಾಗಿದೆ.

ಇದರೊಂದಿಗೆ ಕೆರೆಯಲ್ಲಿ ಹಳೆಯ ತುಕ್ಕು ಹಿಡಿದ ಕತ್ತಿಯೊಂದು ಪತ್ತೆಯಾಗಿದೆ. ಪೋಲಿಸ್ ನಿರೀಕ್ಷಕ ಸುಬ್ಬಪುರ್ ಮಠ ಹಾಗೂ ಎಸ್ ಐ ಆನಂದ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಈ ಬಗ್ಗೆ ಸೋಕೋ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ‌. ಟಾರ್ಚ್ ಲೈಟ್ ಬಾಲಕ ಸುಮಂತ್ ಹಿಡಿದುಕೊಂಡು ಹೋಗಿದ್ದ ಲೈಟ್ ಆಗಿದೆಯೇ ಎಂಬ ಸಂಶಯ ಇದೆ. ಪೋಲಿಸರು ಮತ್ತಷ್ಟು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಗಾಗಿ ಪೊಲೀಸರ ಮನವಿ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಕುಲಾಲ ಮಂದಿರದ ಬಳಿ ಬೃಹತ್ ಮರಗಳು ರಸ್ತೆಯ ಅಂಚಿನಲ್ಲಿದ್ದು ತೆರವುಗೊಳಿಸುವಂತೆ ಹರೀಶ್ ಕಾರಿಂಜ ಒತ್ತಾಯ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಹಬ್ಬ ಆಚರಣೆ

Suddi Udaya

ವೇಣೂರು ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ಮರ್ಹೂಮ್ ಅಝ್ರಿನ್ ಸಿದ್ದೀಕ್ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Suddi Udaya

ನಾಳೆ(ಅ.19): ಅನುಗ್ರಹದಲ್ಲಿ ಹಿರಿಯ ವಿದ್ಯಾರ್ಥಿಗಳ “ಅನುಗ್ರಹ ಸಮಾಗಮ 2025”

Suddi Udaya
error: Content is protected !!