25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಯನಾಡು: ಅರೆಪ್ರಜ್ಞಾ ಸ್ಥಿತಿಯಲ್ಲಿ ಒಂದುವರೆ ವರ್ಷದ ಚಿರತೆ ಪತ್ತೆ

ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ಸಮೀಪದ ಪಿಲಾತಬೆಟ್ಟು ನಿನ್ಯಾರು ಎಂಬಲ್ಲಿ ಒಂದುವರೆ ವರ್ಷದ ಚಿರತೆಯೊಂದು ಸೆರೆಯಾದ ಬಗ್ಗೆ ಜ.15 ರಂದು ವರದಿಯಾಗಿದೆ.

ಅರೆಪ್ರಜ್ಞಾ ಸ್ಥಿತಿಯಲ್ಲಿ ನಿನ್ಯಾರು ಪರಿಸರದ ಖಾಸಗಿ ಜಮೀನಿನ ರಬ್ಬರ್ ತೋಟದಲ್ಲಿ ಚಿರತೆ ಪತ್ತೆಯಾಗಿದೆ. ಎಲ್ಲಿಂದಲೋ ಉರುಳಿಗೆ ಬಿದ್ದಿದ್ದ ಚಿರತೆ ಅರಪ್ರಜ್ಞಾ ಸ್ಥಿತಿಯಲ್ಲಿ ಅಲ್ಲಿ ಬಿದ್ದಿತ್ತು. ಮಂಗಳೂರು ವೃತ್ತದ ವನ್ಯಜೀವಿ ಪಶುವೈದ್ಯ ಡಾ.ಯಶಸ್ವಿ ನಾರಾವಿ ಆಗಮಿಸಿ ಅರವಳಿಕೆ ಮದ್ದು ನೀಡಿ ಸಿಕ್ಕಿಹಾಕಿಕೊಂಡಿದ ಉರುಳನ್ನು ತೆಗೆದು ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಮೂಡಬಿದರೆ ಎಸಿಎಫ್ ಶ್ರೀಧರ್.ಪಿ ಮಾರ್ಗದರ್ಶನದಲ್ಲಿ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ ನೇತೃತ್ವದ ಡಿ.ಆರ್.ಡಿ.ಒ ಅಶ್ವಿತ್ ಗಟ್ಟಿ ಮತ್ತು ಸುನಿಲ್ ಕುಮಾರ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಅರಣ್ಯ ಇಲಾಖೆ ಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಹಿಡಿಯುವ ಬೋನನ್ನು ಸ್ನೇಹಗಿರಿ ಪರಿಸರದ ವ್ಯಾಪ್ತಿಯಲ್ಲಿ ಅಳವಡಿಸಲಾಗಿತ್ತು. ಸ್ನೇಹಗಿರಿಯಲ್ಲಿ ಬೋನು ಅಳವಡಿಸಲು ನೈನಾಡು ಶ್ರೀ ರಾಮ ಯುವಕ ಸಂಘದ ಸದಸ್ಯರುಗಳು ಸಹಕಾರ ನೀಡಿದ್ದರು.

ನೈನಾಡು, ಹೊಸಪಟ್ಣ ವ್ಯಾಪ್ತಿಯಲ್ಲಿ ಚಿರತೆಯ ಓಡಾಡುವಿಕೆ ದಿನನಿತ್ಯ ಕಂಡು ಬರುತ್ತಿದೆ. ಜ.೧೪ ರಾತ್ರಿ ಹೊಸಪಟ್ಣ ಪರಾರಿ ಸುರೇಶ್ ಪೂಜಾರಿಯವರ ಮನೆಯ ಕೋಳಿಯನ್ನು ಹೊತ್ತೊಯ್ದಿದ್ದು, ನಂತರ ಹೊಸಪಟ್ಣ ದೊಡ್ಯಾರು ಸಮೀಪ ಚಿರತೆಯ ಕೂಗು ಇಡೀ ರಾತ್ರಿ ಕೇಳುತ್ತಲೇ ಇತ್ತು ಎಂದು ಊರ ಕೃಷಿಕರು ತಿಳಿಸಿದ್ದಾರೆ. ಇದರಿಂದ ಕೃಷಿಕರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತುಂಬಾ ಆತಂಕಕ್ಕೀಡಾಗಿದ್ದಾರೆ. ಇದೀಗ ಹೊಸಪಟ್ಣದ ದೊಡ್ಯಾರು ಸಮೀಪ ಬೋನು ಅಳವಡಿಸುವಂತೆ ನಾಗರಿಕರು ತಿಳಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 30ನೇ ವರ್ಷದ ಜ್ಞಾನ ದರ್ಶಿನಿ ಮತ್ತು ಜ್ಞಾನ ವರ್ಷಿಣಿ ನೈತಿಕ ಮೌಲ್ಯಧಾರಿತ ಪುಸ್ತಕ ಲೋಕಾರ್ಪಣೆ,ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ

Suddi Udaya

ಉಜಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

Suddi Udaya

ಪುಂಜಾಲಕಟ್ಟೆ-ಪುರಿಯ-ಕುಕ್ಕೇಡಿ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

Suddi Udaya

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಪರಿಸರ ಅಧಿಕಾರಿಯವರ ಕಾರ್ಯಾಚರಣೆ ಸಭೆ

Suddi Udaya

ಭಾಜಪ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ

Suddi Udaya
error: Content is protected !!