25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಮನೆಯಿಂದ ಜ‌.14 ರಂದು 5 ಗಂಟೆಗೆ ಹೊರಟು ಹೋದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿವಿಧ ತಂಡದಿಂದ ತಡ ರಾತ್ರಿಯಿಂದಲೇ ತೀವ್ರ ಶೋಧ ಮತ್ತು ಕೂಬಿಂಗ್ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಸುಮಂತ್ ಮೃತದೇಹ ಸಿಕ್ಕ ಸುತ್ತಮುತ್ತಲಿನಲ್ಲಿ FSL ತಂಡ, SOCO ತಂಡ, ಪೊಲೀಸರ ತಂಡದಿಂದ ಜ.14 ರಂದು ರಾತ್ರಿ 8:30 ರಿಂದ 11:30 ರ ವರೆಗೆ ರಕ್ತದ ಕಲೆಗಳು ಬಿದ್ದ ಜಾಗಗಳಲ್ಲಿ ಕೆಮಿಕಲ್ ಮೂಲಕ ಗುರುತಿಸುವ ‘ಲೂಮಿನಿಯನ್ ಟೆಸ್ಟ್’ ಮೂಲಕ ಮಾಡಿದ್ದಾರೆ.

ಬಾಲಕ ಸುಮಂತ್ ಮೃತದೇಹ ಪತ್ತೆಯಾದ ಬೆನ್ನಲ್ಲೇ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಾಲಕನ ಸಾವು ಹಲವು ಸಂಶಯಗಳಿಗೆ ಕಾರಣವಾಗಿದೆ. ಮೃತದೇಹ ಪತ್ತೆಯಾದ ತೋಟದ ಕೆರೆಯ ಪ್ರದೇಶದ ಸುತ್ತಮುತ್ತ ಸಾಕ್ಷ್ಯಾಧಾರಕ್ಕಾಗಿ ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಒಂದು ತಂಡ ಜ.15 ರಂದು ಬೆಳಗ್ಗೆ ಕೆರೆಯ ನೀರನ್ನು ಪಂಪ್ ಬಳಸಿ ಹಿಂಗಿಸುವ ಕಾರ್ಯ ನಡೆಯುತ್ತಿದ್ದು. ಈಗಾಗಲೇ ಬಾಲಕ ಸುಮಂತ್ ಮೃತದೇಹ ಮನೆಗೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ತಲೆಗೆ ಮೂರು ಬಲವಾದ ಗಾಯದ ಗುರುತು ಹಾಗೂ ಶ್ವಾಸಕೋಶದಲ್ಲಿ ನೀರಿನಾಂಶ ಕೂಡ ಶವಪರೀಕ್ಷೆ ವೇಳೆ ಪತ್ತೆ ಹಚ್ಚಿದ ಮಂಗಳೂರು ವೈದ್ಯರು.

ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು, ಬೆಳ್ತಂಗಡಿ,ಪುಂಜಾಲಕಟ್ಟೆ,ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಶಿಬಾಜೆಯ ದಲಿತ ಯುವಕ ಶ್ರೀಧರ್ ಸಾವಿನ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಡಿ.ಎಸ್.ಎಸ್‌ನಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

Suddi Udaya

ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಗೆ ಚಾಲನೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ವೃತ ನಿರೀಕ್ಷಕರಿಗೆ ಮನವಿ

Suddi Udaya

ಮಾತೃಶ್ರೀಡಾ. ಹೇಮಾವತಿ ಬಿ ಹೆಗ್ಗಡೆಯವರಿಗೆ ಸಾಧನಾ ರಾಜ್ಯಪ್ರಶಸ್ತಿ ಪ್ರದಾನ

Suddi Udaya

ಫೆ.8: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ “ವಾಕ್-ಇನ್ ವಿದ್ವತ್”-ಎ ಸ್ಟೆಪ್ ಇಂಟು ಸಕ್ಸಸ್” :ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ

Suddi Udaya

ಬದ್ಯಾರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya
error: Content is protected !!