September 6, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಡ್ಡಂದಡ್ಕ ಕಟ್ಟೆ: ಪುನಃ ಪ್ರತಿಷ್ಠಾ ಕಲಶಾಭಿಷೇಕ, ದೊಂಪದಬಲಿ ನೇಮೋತ್ಸವ

ವೇಣೂರು: ಐದು ಗ್ರಾಮಗಳಿಗೆ ಸಂಬಂಧಿಸಿದ ಶ್ರೀ ದೈವ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ಸಾನಿಧ್ಯ ಪಡ್ಡಂದಡ್ಕದ ಗಡುಸ್ಥಳ ಕಟ್ಟೆಯಲ್ಲಿ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಪರ್ವಸೇವೆ ಹಾಗೂ ದೊಂಪದಬಲಿ ನೇಮೋತ್ಸವವು ವೇ.ಮೂ. ಮಾರೂರು ಖಂಡಿಗದ ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಜ್ರಂಭನೆಯಿಂದ ಜರಗಿತು.

ಪೆರಿಂಜೆ ರಾಜ್ಯಗುತ್ತು, ಕರಿಮಣೇಲು ಮಾಗಣೆಗುತ್ತು, ಬಡಕೋಡಿ ಗುತ್ತು, ಪಡ್ಯೋಡಿಗುತ್ತು, ಮೂಡುಕೋಡಿಗುತ್ತು ಜೀಣೋದ್ದಾರ ಸಮಿತಿಯ ಅಧ್ಯಕ್ಷರಾದ ಜಿನರಾಜ್ ಜೈನ್ ಪದ್ಮಾಂಬ ಹಾಗೂ ಐದು ಗ್ರಾಮಗಳ ಬರ್ಕೆಯವರು ಉಪಸ್ಥಿತಿಯಲ್ಲಿ ಬೆಳಿಗ್ಗೆ ಧರ್ಮದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವಸೇವೆ ನಡೆಯಿತು.

ಸಂಜೆ ನವಕ ಕಲಶಾಭಿಷೇಕ, ವಿವಿಧ ಗುತ್ತುಗಳಿಂದ ಭಂಡಾರ ಬಂದು ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ಕಲ್ಕುಡ ಕಲ್ಲುರ್ಟಿ, ಕಾಳಮ್ಮ ದೈವಗಳ ಬಲಿ ನೇಮ ನಡೆಯಿತು. ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಗಂಧಪ್ರಸಾದ ಸ್ವೀಕರಿಸಿದರು. ಸಾಯಂಕಾಲ ಸಾರ್ವಜಕರಿಗೆ ಉಪಹಾರ ಹಾಗೂ ಅನ್ನ ಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.

Related posts

ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವತಿಯಿಂದ ವಿ. ಹರೀಶ್ ನೆರಿಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬುದು ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ: ಪ್ರತಾಪಸಿಂಹ ನಾಯಕ್

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿಯಲ್ಲಿ ಶ್ರೀಮತಿ ಆಶಾಲತಾಪ್ರಶಾಂತ್ ರವರ ಕೈ ಚಳಕದಲ್ಲಿ ಮೂಡಿ ಬಂದ ಆಪರೇಷನ್ ಸಿಂಧೂರ ಅದ್ಭುತ ರಂಗೋಲಿ

Suddi Udaya

ಮಾ.24: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಬೆಳ್ತಂಗಡಿಗೆ ಭೇಟಿ

Suddi Udaya
error: Content is protected !!