
ಉರುವಾಲು : ಉರುವಾಲು ಗ್ರಾಮದ ಹರೀಶ್ ಗೌಡ ಇವರ ಮನೆಯಲ್ಲಿ ಮತ್ತು ಬಂದಾರು ಗ್ರಾಮದ ಅತಾವು ವಾಸಪ್ಪ ಗೌಡ ಇವರ ಮನೆಯಲ್ಲಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ- ಕಲ್ಲೇರಿ ಶಾಖೆಯ ಸ್ವ-ಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮ ಜ. 14 ನಡೆಯಿತು.

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಉದ್ಘಾಟಿಸಿದರು. ನಿರ್ದೇಶಕರಾದ ಶ್ರೀನಾಥ್ ಕೆ, ಎಮ್.ಮಾಧವ ಗೌಡ, ಸುನಿಲ್ ಅನಾವು, ಪುರಂದರ ನೈಮಾರು, ಮುಖ್ಯ ಕಾರ್ಯನಿರ್ವಾಧಿಕಾರಿ ಧನಂಜಯ್ ಕುಮಾರ್ ಕಲ್ಲೇರಿ, ಶಾಖಾ ವ್ಯವಸ್ಥಾಪಕರಾದ ನಿತೇಶ್ ಉಪಸ್ಥಿತರಿದ್ದರು.











