23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಕ್ಕಡ: ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ನವೀಕೃತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಲೋಕಾರ್ಪಣೆ ಹಾಗೂ 38ನೇ ವರ್ಷದ ಮಕರ ಸಂಕ್ರಮಣೋತ್ಸವ; ಧಾರ್ಮಿಕ ಸಭೆ

ಕೊಕ್ಕಡ: ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ನವೀಕೃತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಲೋಕಾರ್ಪಣೆ ಜ.13ರಂದು ನಡೆಯಿತು.

ಜ.14ರಂದು 38ನೇ ವರ್ಷದ ಮಕರ ಸಂಕ್ರಮಣೋತ್ಸವ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಗೌಡ ಕೊಡಿಂಗೇರಿ ವಹಿಸಿದ್ದರು.

ಸೌತಡ್ಕ ಶ್ರೀ ಮಹಾಗಣಪತಿ ಸೇವಾಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಕಾರ್ಯಕ್ರಮದ ದೀಪ ಪ್ರಜ್ವಲನೆಗೊಳಿಸಿದರು.

ಶ್ರೀ ಕ್ಷೇ. ಧ.ಗ್ರಾ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಧಾರ್ಮಿಕ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕೊಕ್ಕಡ ವೈದ್ಯನಾಥೇಶ್ವರ ರೆಸಿಡೆನ್ಸಿಯ ಕೆ.ಎಂ ನಾಗೇಶ್ ಕುಮಾರ್ ಗೌಡ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ದ.ಕ ಜಿ.ಕೆ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ನಿವೃತ್ತ ಸಮನ್ವಯ ಅಧಿಕಾರಿ ಗಣೇಶ್ ಐತಾಳ್, ಕೊಕ್ಕಡ ಶ್ರೀರಾಮ ಸೇವಾಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಪ್ರಗತಿಪರ ಕೃಷಿಕರು ಹಾಗೂ ಉದ್ಯಮಿಗಳಾದ ಗಣೇಶ್ ಕಲಾಯಿ, ಗ್ರಾ.ಪಂ. ಅಧ್ಯಕ್ಷೆ ಬೇಬಿ, ಉಪ್ಪಾರಪಳಿಕೆ ಶ್ರೀ ಕೃಷ್ಣ ಟ್ರಸ್ಟ್ ಅಧ್ಯಕ್ಷ ಶ್ರೀನಾಥ್ ಬಡೆಕೈಲು, ಕೆಂಪಕೋಡಿ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಗೌರವಾಧ್ಯಕ್ಷ ಉಗ್ಗಪ್ಪ ಕರ್ಕೇರ ಉಪಸ್ಥಿತರಿದ್ದರು.

ಈ ವೇಳೆ ಅರ್ಚಕರಾದ ಮುತ್ತಪ್ಪ ಗೌಡ ಡೆಂಜ, ನಿವೃತ್ತ ಶಿಕ್ಷಕ ಕುಂಞಪ್ಪ ಗೌಡ, ಗುರುಸ್ವಾಮಿ ಜಿನ್ನಪ್ಪ ಗೌಡ, ಉದ್ಯಮಿ ಕೆ.ಎಂ ನಾಗೇಶ್ ಕುಮಾರ್, ಯತೀಶ್ ಟಿ.ಎಂ., ರುಕ್ಮಯ್ಯ ಮಡಿವಾಳ ಹಾಗೂ ಭಜನಾ ಮಂಡಳಿಗೆ ವಸ್ತುಗಳನ್ನು ನೀಡಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಶಿಕುಮಾರ್ ಎಂ.ಪಿ., ಭಜನಾ ಮಂಡಳಿ ಕಾರ್ಯದರ್ಶಿ ಎಂ. ಗಣೇಶ್ ಮಲ್ಲಿಗೆಮಜಲು, ಜೀರ್ಣೋದ್ಧಾರ ಸಮಿತಿ ಹಾಗೂ ಭಜನಾ ಮಂಡಳಿ ಸಮಿತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

ಪೃಥ್ವಿ , ನಿಧಿ , ನಿಶಾ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರುಕ್ಮಯ್ಯ ಮಡಿವಾಳ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕುಂಞಪ್ಪ ಗೌಡ , ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ಹಳ್ಳಿಂಗೇರಿ ಧನ್ಯವಾದವಿತ್ತರು. ಶಿಕ್ಷಕ ದಾಮೋದರ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.

ನಂತರ ಶ್ರೀ ರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಿತು.

Related posts

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶೋನಮನ ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧನುಶ್ರೀ ಎಸ್ ಕುಲಾಲ್ ತೃತೀಯ

Suddi Udaya

ಇಂದಿನಿಂದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ಸಂಜೆ ಹೊರೆಕಾಣಿಕೆ ವೈಭವ ಹಾಗೂ ಒಂದು ಸಾವಿರ ಅಧಿಕ ಮಕ್ಕಳಿಂದ ನೃತ್ಯ ಭಜನೆ

Suddi Udaya

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಕೊಕ್ಕಡ ವಲಯದ ಹಳ್ಳಿoಗೇರಿಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಕೊಯ್ಯೂರು ಶ್ರೀಕೃಷ್ಣ ಭಜನಾ ಮಂಡಳಿ ಭಜನೋತ್ಸವ

Suddi Udaya
error: Content is protected !!