32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪ್ರಯೋಜನಕ್ಕೆ ಬಾರದ ಜಿಯೋ ಟವರ್ ಗಳು: ಎರಡು ವರ್ಷಗಳಿಂದ ಭೂ ಮಾಲೀಕರಿಗೆ ಬಾಡಿಗೆ ನೀಡದ ಸಂಸ್ಥೆ: ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ವ್ಯಾಪಾರಸ್ಥರು

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಮೂರು ಮಾರ್ಗದ ಬಳಿ ಇರುವ ಜಿಯೋ ಟವರ್ ಸೇರಿದಂತೆ ಗುರುವಾಯನಕೆರೆ, ಮಡಂತ್ಯಾರು ನಲ್ಲಿರುವ ಸಂಸ್ಥೆಯ ಟವರ್ ಗಳು ಕೆಟ್ಟು ಎರಡು ವಾರ ಕಳೆದರೂ ಇನ್ನೂ ಕೂಡ ಇದರ ಕಂಪೆನಿಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ, ಗ್ರಾಹಕರ ಕರೆಗೆ ಸರಿಯಾದ ಸ್ಪಂದನೆಯನ್ನು ನೀಡದೆ ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರು, ಪರದಾಡುವಂತಹ ಪರಿಸ್ಥಿತಿ ಒಂದೆಡೆಯಾದರೆ ಟವರ್ ಇರುವಂತಹ ಸ್ಥಳದ ಭೂ ಮಾಲೀಕರಿಗೆ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಬಾಡಿಗೆಯ ಹಣವನ್ನು ನೀಡದೆ ಸತಾಯಿಸುತ್ತಿದೆ.

ನಗರ ವ್ಯಾಪ್ತಿಯ ಹಲವು ಸಮಸ್ಯೆಗಳು ಇಲ್ಲಿನ ಸಾಮಾಜಿಕ ಕಾರ್ಯಕರ್ತರ, ಜನಪ್ರತಿನಿಧಿಗಳ ಮುತುವರ್ಜಿಯಿಂದ ಪರಿಹಾರವಾಗಿದೆ. ಆದರೆ ಇಲ್ಲಿನ ಜಿಯೋ ಸಿಮ್ ಹೊಂದಿರುವ ಗ್ರಾಹಕರಿಗೆ ನೆಟ್ವರ್ಕ್ ಸಮಸ್ಯೆಯಾಗಿದ್ದು, ಸದ್ಯ ಯಾವುದೇ ಯೋಚನೆ ಯೋಜನೆ ಇಲ್ಲದೆ ನೆಟ್ವರ್ಕ್ತೆಗೆದಿರುವ ಕಾರಣ ಗ್ರಾಹಕರ ಹಿಡಿ ಶಾಪಕ್ಕೆ ಕಂಪನಿ ಹಾಗೂ ಅಧಿಕಾರಿಗಳು ಗುರಿಯಾಗಿದ್ದಾರೆ. ಪ್ರತಿಷ್ಠಿತ ಜಿಯೋ ಕಂಪೆನಿ ಉತ್ತಮ ಎಂಬ ಕಾರಣಕ್ಕಾಗಿ ಈ ಹಿಂದೆ ಬೇರೆ ಕಂಪನಿಯ ಸಿಮ್ ನ್ನು ಹೊಂದಿದ್ದ ಗ್ರಾಹಕರು ಜಿಯೋ ಸಿಮ್ ಗಾಗಿ ಪೋರ್ಟ್ ಮಾಡಿಕೊಂಡಿದ್ದರು, ಆದರೆ ಈಗ ಯಾವುದು ಇಲ್ಲದಂತಾಗಿದೆ. ಜಿಯೋ ಸಿಮ್ ಗೆ ಮಾಡಿರುವ ರಿಚಾರ್ಜ್ ನೀರಿನಲ್ಲಿ ಮಾಡಿದ ಹೋಮದ ರೀತಿ ಆಗಿದೆ ಎಂದು ಗ್ರಾಹಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಳ್ತಂಗಡಿ ನಗರದಲ್ಲಿರುವ ಜಿಯೋ ಟವರ್ ಭೂಷಣ್ ಕರಂಬಾರು ಎಂಬವರ ಮಾಲಕತ್ವದ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಇದ್ದು, ಸದ್ರಿ ಭೂ ಮಾಲೀಕರಿಗೆ ಜಿಯೋ ಕಂಪೆನಿಯವರು ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಬಾಡಿಗೆಯನ್ನು ನೀಡದೆ ಇರುವ ಕಾರಣ ಬೀಗ ಹಾಕಿ ಹೋಗಿರುತ್ತಾರೆ. ಅದೇ ರೀತಿ ಗುರುವಾಯನಕೆರೆಯಲ್ಲಿ ವಿಶ್ವೇಶ್ ಕಿಣಿ ರವರ ಭೂಮಿಯಲ್ಲಿರುವ ಟವರ್ ನ ಒಪ್ಪಂದವು ರದ್ದಾಗಿ 16 ತಿಂಗಳುಗಳು ಆಗಿದ್ದು, ಅವರಿಗೂ ಕೂಡ ಸಂಸ್ಥೆಯು ಬಾಡಿಗೆ ಹಣವನ್ನು ಪಾವತಿ ಮಾಡದೆ ಸತಾಯಿಸುವ ಕೆಲಸ ಮಾಡಿದೆ ಎಂದು ಭೂ ಮಾಲೀಕ ವಿಶ್ವೇಶ್ ಕಿಣಿಯವರು ಸುದ್ದಿ ಉದಯಕ್ಕೆ ತಿಳಿಸಿದ್ದಾರೆ.

ವ್ಯವಹಾರಕ್ಕೆ ತೊಂದರೆ: ನಾನು ಕೂಡ ಜಿಯೋ ಸಿಮ್ ನ್ನು ಹೊಂದಿದ್ದು, ನಮ್ಮ ಮೊಬೈಲ್ ಫೋನ್ ನಲ್ಲಿ ನೆಟ್ವರ್ಕ್ ತೋರಿಸುತ್ತದೆ. ಆದರೆ ಫೋನ್ ಕರೆ ಮಾಡುವುದಕ್ಕೆ ಆಗುವುದಿಲ್ಲ. ನಮ್ಮ ಕಚೇರಿಗೆ ಆಗಮಿಸಿದ ಗ್ರಾಹಕರು ಹಣ ಪಾವತಿ ಆಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ.
-ಭಗತ್ ರಾಮ್, ಮಾಲಕರು, ದ್ವಾರಕಾ ಸರ್ವಿಸಸ್ ಬೆಳ್ತಂಗಡಿ

Related posts

ಲಾಯಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ ‘ ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ‘ ಪ್ರಶಸ್ತಿ

Suddi Udaya

ಮಿತ್ತಬಾಗಿಲು: ಹಿರಿಯ ದೈವನರ್ತಕ ಅಣ್ಣು ನಲಿಕೆ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಭಾರಿ ಮೈಫ್ಸ್ (MIFSE) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಜಂಟಿ ಸಹಯೋಗದಲ್ಲಿ ಡಿಪ್ಲೋಮಾ, ಪಿ ಜಿ ಡಿಪ್ಲೋಮಾ ಹಾಗೂ ತಾಂತ್ರಿಕ , ವೃತ್ತಿಪರ ತರಬೇತಿ ಸಂಸ್ಥೆ ಶೀಘ್ರದಲ್ಲಿ ಆರಂಭ

Suddi Udaya
error: Content is protected !!