September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪವರ್ ಆನ್ ಸಂಸ್ಥೆಗೆ ದಶಕದ ಸಂಭ್ರಮ: ಲಕ್ಕೀ ಸ್ಕೀಂ ಬಂಪರ್ ಡ್ರಾ

ಬೆಳ್ತಂಗಡಿ: ಕಳೆದ 10 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬರುತ್ತಿರುವ ಶೀತಲ್ ಜೈನ್ ಮಾಲಕತ್ವದ ಪವರ್ ಆನ್ ಸಂಸ್ಥೆಯು ದಶಕದ ಸಂಭ್ರಮಾಚರಣೆಯಲ್ಲಿ ಲಕ್ಕೀ ಸ್ಕೀಂ ನ ಕೊನೆಯ ಬಂಪರ್ ಡ್ರಾ ದಲ್ಲಿ ಬಳಂಜ ಸ್ಮಯ ಎಸ್ ಕೋಟ್ಯಾನ್ ರವರಿಗೆ ಸ್ಕೂಟಿ ಬಂಪರ್ ಬಹುಮಾನ ಲಭಿಸಿದೆ.

ಕಾರ್ಯಕ್ರಮದ ಮುಖ್ಯ ಅತಿಥಿ ಅಳದಂಗಡಿ ಸೊಸೈಟಿ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಮಾತನಾಡಿ ನಗುಮೊಗದ ಸೇವೆ ಹಾಗೂ ಗುಣಮಟ್ಟದ ವಸ್ತುಗಳ ಪೂರೈಕೆಯಿಂದ ಪವರ್ ಆನ್ ಸಂಸ್ಥೆಯು ಬೆಳೆದಿದೆ ಎಂದರು.

ಸಂಸ್ಥೆಯ ಮಾಲಕ ಶೀತಲ್ ಜೈನ್ ನಿರಂತರ ಸಹಕಾರ ನೀಡುತ್ತಿರುವ ಗ್ರಾಹಕ ಮಿತ್ರರಿಗೆ ಕೃತಜ್ಞತೆ ಅರ್ಪಿಸಿದರು. ಬಂಪರ್ ಬಹುಮಾನವನ್ನು ಸಂಸ್ಥೆಯ ಮಾಲಕ ಶೀತಲ್ ಜೈನ್ ಮತ್ತು ಸಿಬ್ಬಂದಿಗಳು ಸ್ಮಯ ಎಸ್ ಕೋಟ್ಯಾನ್, ಅಮೃತಾ ಎಸ್ ಕೋಟ್ಯಾನ್, ಸಂತೋಷ್ ಪಿ ಕೋಟ್ಯಾನ್ ಬಳಂಜರವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಪವರ್ ಅಸನ್ ಸಂಸ್ಥೆಯ ಸಿಬ್ಬಂದಿಗಳ ಹೆತ್ತವರನ್ನು ಆಹ್ವಾನಿಸಿ, ಅವರಿಗೆ ಫಲಪುಷ್ಪ ನೀಡಿ, ಶಾಲು ಹಾಕಿ, ಉಡುಗೊರೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಬಿಲ್ಡಿಂಗ್ ಮಾಲಕರಾದ ರಾಮ್ ದಾಸ್ ಪೈ,ಪ್ರಗತಿಪರ ಕೃಷಿಕರಾದ ಪಾರ್ಶ್ವನಾಥ ಜೈನ್, ಅಯಾನ್ಶ ಮೊಬೈಲ್ ಮಾಲಕ ಅರಿಹಂತ್ ಜೈನ್ ಉಪಸ್ಥಿತರಿದ್ದರು.

ಉತ್ತಮ ಗುಣಮಟ್ಟದ ವಸ್ತುಗಳ ಪೂರೈಕೆಯೊಂದಿಗೆ ಜನರ ಪ್ರೀತಿ ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ.ಇದೀಗ ದಶಕದ ಸಂಭ್ರಮವನ್ನು ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಒಟ್ಟಾಗಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಗ್ರಾಹಕರು ಪವರ್ ಆನ್ ಸಂಸ್ಥೆಗೆ ಆಗಮಿಸಿ ಶುಭಾಶಯ ಸಲ್ಲಿಸಿದರು.

ಪವರ್ ಆನ್ ಸಂಸ್ಥೆಯ ಸುಧೀರ್ ಜೈನ್ ಸ್ವಾಗತಿಸಿ, ಕೀರ್ತಿ ಎಸ್ ನಿರೂಪಿಸಿ, ಮಾನಸ ಶೀತಲ್ ಜೈನ್ ವಂದಿಸಿದರು.

Related posts

ಜೂ.8-ಜು.22 : ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ

Suddi Udaya

ಮಾ.27: ಮುಳಿಯದಲ್ಲಿ ಡೈಮಂಡ್ ಫೆಸ್ಟ್-50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

Suddi Udaya

ಕಳಿಯ ಸಹಕಾರಿ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ: ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ: ಶಾಸಕ ಹರೀಶ್ ಪೂಂಜ ಮತ್ತು ಡಾ. ಎಂ.ಎನ್ ರಾಜೇಂದ್ರ ಕುಮಾರ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ನಿಟ್ಟಡೆ: ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ರೂ.70 ಸಾವಿರ ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪು ಕಳವು

Suddi Udaya

ಬಂದಾರು :ಪೆರ್ಲ -ಬೈಪಾಡಿ ನಿವಾಸಿ ನಾರಾಯಣ ಪೂಜಾರಿ ನಿಧನ

Suddi Udaya

ಕಡಿರುದ್ಯಾವರ: ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

Suddi Udaya
error: Content is protected !!