September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು ವಲಯ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಮಚ್ಚಿನ: ಆಟೋ ಚಾಲಕ ಮಾಲಕರ ಸಂಘ ಮಡಂತ್ಯಾರು ವಲಯ ಇದರ 23 ನೇ ವಾರ್ಷಿಕ ಮಹಾಸಭೆಯು ಜ.15 ರಂದು ಯಸ್ ಡಿ ಯಸ್ ಹಾಲ್ ಮಡಂತ್ಯಾರ್ ಇಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಬದ್ರಿನಾಥ್ ಸಂಪಿಗೆತ್ತಾಯ ಇವರು ಮಾತನಾಡಿ ಮಡಂತ್ಯಾರ್ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕೆಲಸಗಳು ನಡೆಯುತ್ತಿದ್ದು ಆಟೋ ಚಾಲಕರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಎರಡು ಗ್ರಾಮ ಪಂಚಾಯಿತಿಗಳು ಒಟ್ಟು ಸೇರಿ ಮಾಡಿಕೊಡುವಂತೆ ಕೋರಿದರು.

ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್, ಮಾಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್ ಕುಮಾರ್ ಬಳ್ಳಮಂಜ, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.

ಆಟೋ ಚಾಲಕರ ವಿವಿಧ ಬೇಡಿಕೆಯ ಮನವಿಯನ್ನು ಮಡಂತ್ಯಾರು ಹಾಗೂ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸಂಘದ ಗೌರವಾಧ್ಯಕ್ಷ ಬದ್ರಿನಾಥ ಸಂಪಿಗೆತ್ತಾಯ ಹಾಗೂ ಅಧ್ಯಕ್ಷ ಪದ್ಮನಾಭ ಶೆಟ್ಟಿ ನೀಡಿದರು.

ಆಟೋ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷರಾದ ರಾಜೇಶ್ವರಿ ಕೊಕ್ಕಳ ಕಾರ್ಯದರ್ಶಿಯಾಗಿ ರಮೇಶ್ ಕೊಡೈಲು ಬಳ್ಳಮಂಜ ಇವರಿಗೆ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಕಾರ್ಯದರ್ಶಿಯಾದ ವಸಂತ ಬಳ್ಳಮಂಜ ಇವರು ಅಧಿಕಾರ ಹಸ್ತಾಂತರಿಸಿದರು. ಕರುಣಾಕರ ಸ್ವಾಗತಿಸಿದರು. ವಸಂತ ಬಳ್ಳಮಂಜ ವಾರ್ಷಿಕ ವರದಿ ಮಂಡಿಸಿದರು. ರಮೇಶ್ ಕುದ್ರಡ್ಕ ಕಾರ್ಯಕ್ರಮ ನಿರೂಪಿಸಿದರು.

Related posts

ಸೌಜನ್ಯ ಕೊಲೆ ಪ್ರಕರಣ : ಮರು ತನಿಖೆಗೆ ಒತ್ತಾಯಿಸಿ ಆ.27: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳಿಂದ ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಕರಾಯ ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ವಿ.ಹಿಂ.ಪ. ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಘಟಕದ ವತಿಯಿಂದ ಯೋಗ ದಿನಾಚರಣೆ

Suddi Udaya

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ 2 ನೇ ಬಾರಿಗೆ ಪುಷ್ಪಾವತಿ ಪೂಜಾರಿ ಹೇವ, ಉಪಾಧ್ಯಕ್ಷರಾಗಿ ಪ್ರಮೀಳಾ ಜಯಾನಂದ ಆಯ್ಕೆ

Suddi Udaya

ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬರಲಿದೆ ಹೊಸ ಚಲನಚಿತ್ರ “ಪೈಕಾ”

Suddi Udaya

ಭಾರಿ ಸಿಡಿಲು ಮಳೆ: ಕೊಯ್ಯೂರು ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದ ಬೆಂಕಿ

Suddi Udaya

ನೀರ್ನಳ್ಳಿ ಗಣಪತಿಯವರಿಗೆ ಉಂಡೆಮನೆ ಗೌರವ ಪ್ರಶಸ್ತಿ

Suddi Udaya
error: Content is protected !!