September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬರಲಿದೆ ಹೊಸ ಚಲನಚಿತ್ರ “ಪೈಕಾ”

ಬೆಳ್ತಂಗಡಿ: ಚಲನಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ಪ್ರೇಕ್ಷಕರ ಮನದಲ್ಲಿ ಮನೆ ಮಾಡಿ, ದಸ್ಕತ್ ಎಂಬ ಚಲನಚಿತ್ರದ ಮೂಲಕ ಬಹುದೊಡ್ಡ ಯಶಸ್ಸು ಪಡೆದು, ಈಗ ಅದೇ ತಂಡ ಮತ್ತೊಂದು ಹೊಸ ಮೈಲುಗಲ್ಲಿಗೆ ತಲುಪುವ ಹುರುಪಲ್ಲಿದ್ದಾರೆ.

ಇದು ತುಳು, ಕನ್ನಡ, ಹಾಗೂ ಮಲಯಾಳಂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಹೊಸ ಚಲನಚಿತ್ರ ಅದುವೇ ಪೈಕಾ.

ಉದಯ್ ಪೂಜಾರಿ ಬಲ್ಲಾಳ್ ಬಾಗ್ ಅರ್ಪಿಸುವ ಪಿ ಎಸ್ ಪ್ರೊಡಕ್ಷನ್ಸ್ ನಿರ್ಮಾಣದ, ನಿರ್ಮಾಪಕ ಲಿಖಿತ್ ಆರ್ ಕೋಟ್ಯಾನ್, ಸಹ ನಿರ್ಮಾಪಕ ಸ್ವಸ್ತಿಕ್ ಆರ್ಯ, ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಯಕನಾಗಿ ಸ್ವಸ್ತಿಕ ಆರ್ಯ ಬಣ್ಣ ಹಚ್ಚಲಿದ್ದಾರೆ, ಉದಯ್ ಪೂಜಾರಿ ಬಳ್ಳಾಲ್ ಬಾಗ್ ಖಳ ನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಕರಾವಳಿಯ ಹಲವಾರು ಕಲಾವಿದರ ದಂಡು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದೆ. ಸ್ಮಿತೇಶ್ ಬಾರ್ಯ, ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಛಾಯಾಗ್ರಹಣ ಸಂತೋಷ್ ಆಚಾರ್ಯ, ಸಂಕಲನ ಗಣೇಶ್ ನೀರ್ಚಾಲ್, ಸಂಗೀತ ಸಮರ್ಥನ್ ಎಸ್ ರಾವ್, ಹಾಗೂ ತಂಡದಲ್ಲಿ ಪ್ರಜೇಶ್ ಶೆಟ್ಟಿ, ನಿಶಿತ್ ಶೆಟ್ಟಿ ,ನೀರಜ್ ಕುಂಜರ್ಪ, ದೀಕ್ಷಿತ್ ಕೆ ಅಂಡಿಂಜೆ, ಮನೋಜ್ ಆನಂದ್‌, ದೀಕ್ಷಿತ್ ಧರ್ಮಸ್ಥಳ, ವಿನೋದ್ ರಾಜ್ ಕಲ್ಮಂಜ ಜೊತೆಯಾಗಿದ್ದಾರೆ.

ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ತಂಡ, ಪೈಕಾ ಮೂಲಕ ಮನರಂಜನೆಯ ಜೊತೆಗೆ ದೊಡ್ಡ ಯಶಸ್ಸು ಸಾಧಿಸಲಿದ್ದಾರೆ.

Related posts

ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಗೆ ಶಿಲಾನ್ಯಾಸ

Suddi Udaya

ಅಂಡಿಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವ ಪುತ್ರನ್ ನಿಧನ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 6 ನೇ ಸ್ಥಳದಲ್ಲಿ ಅವಶೇಷಗಳು ಪತ್ತೆ

Suddi Udaya

ಕೃಷಿಕ ಹಾಕೋಟೆ ಗಂಗಯ್ಯ ಗೌಡ ನಿಧನ

Suddi Udaya

ಕುತ್ಲೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!